ಸೋಮವಾರ, ಜನವರಿ 20, 2020
29 °C

ಹಗರಣದಲ್ಲಿ ಪಾತ್ರವಿಲ್ಲ: ಕುಶಾವ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫಾರೂಖಾಬಾದ್ (ಪಿಟಿಐ): `ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ಎನ್‌ಎಚ್‌ಆರ್‌ಎಂ) ಯೋಜನೆಯ ಬಹುಕೋಟಿ ಹಗರಣದಲ್ಲಿ ನನ್ನ ಪಾತ್ರವೇನೂ ಇಲ್ಲ~ ಎಂದು ಬಿಎಸ್‌ಪಿ ಉಚ್ಛಾಟಿತ ನಾಯಕ ಬಾಬು ಸಿಂಗ್ ಕುಶಾವ ಗುರುವಾರ ಸಮರ್ಥಿಸಿಕೊಂಡಿದ್ದಾರೆ.

ಬಿಎಸ್‌ಪಿ ತೊರೆದು ಬಿಜೆಪಿ ಸೇರಿದ ನಂತರ ಇದೇ ಮೊದಲ ಬಾರಿಗೆ ಮಾತನಾಡಿದ ಅವರು, `ಬಿಎಸ್‌ಪಿಗೆ 28 ವರ್ಷಗಳ ಸೇವೆ ಸಲ್ಲಿಸಿದ ನಂತರ ನನ್ನನ್ನು ಉಚ್ಛಾಟಿಸಲಾಗಿದೆ. ಹಿಂದುಳಿದ ವರ್ಗಗಳಲ್ಲಿ ನನ್ನ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಸಹಿಸದೆ ಹೀಗೆ ಮಾಡಲಾಗಿದೆ~ ಎಂದು `ಸೈನಿ ಶಕ್ಯ ಕುಶಾವ~ ಜನಾಂಗದ ಸಮಾವೇಶದಲ್ಲಿ ಹೇಳಿದರು.

`ರಾಜ್ಯ ಸರ್ಕಾರ ಪೊಲೀಸ್ ಬಲ ಬಳಸಿಕೊಂಡು ವಿನಾಕಾರಣ ನನ್ನ ಮೇಲೆ ದೂರು ದಾಖಲಾಗುವಂತೆ ನೋಡಿಕೊಂಡಿತು. ನನ್ನನ್ನು ಅವಹೇಳನ ಮಾಡಲು ಮಾಧ್ಯಮಗಳನ್ನೂ ಬಳಸಿಕೊಂಡಿತು~ ಎಂದು ದೂಷಿಸಿದರು.

ಪ್ರತಿಕ್ರಿಯಿಸಿ (+)