ಭಾನುವಾರ, ಮೇ 22, 2022
21 °C

ಹಗಲಲ್ಲೂ ಬೆಳಗುವ ಬೀದಿ ದೀಪಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಹಗಲಿನ ವೇಳೆ ಬೀದಿ ದೀಪಗಳು ನಿರಂತರವಾಗಿ ಉರಿದು ಸಾವಿರಾರು ಯೂನಿಟ್‌ನಷ್ಟು ವಿದ್ಯುತ್ ನಷ್ಟವಾಗುತ್ತಿದೆ. ಆದರೂ ಸಂಬಂಧಪಟ್ಟವರು ಇದರ ಕಡೆ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ.ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ವೆಚ್ಚಮಾಡಿ ಸೌರಶಕ್ತಿಯ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಬೀದಿ ದೀಪಗಳು ರಾತ್ರಿವೇಳೆ ಉರಿಯುವುದು ಸಾರ್ವಜನಿಕವಾಗಿ ಉಪಯುಕ್ತವಾಗುತ್ತದೆ. ಆದರೆ ಬೆಳಗಿನ ವೇಳೆಯಲ್ಲಿ ಉರಿಯುವುದು ಯಾರಿಗೂ ಉಪಯೋಗವಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಬಳಕೆಯಾದ ವಿದ್ಯುತ್‌ಗೆ ಪಂಚಾಯಿತಿಯಿಂದಲೇ ಹಣ ಪಾವತಿಸಲಾಗುತ್ತಿದ್ದರೂ ಆ ಹಣ ಸಾರ್ವಜನಿಕರದ್ದಾಗಿದೆ. ಸರಿಯಾದ ನಿರ್ವಹಣೆ ಇಲ್ಲದೇ ಹಗಲಿನಲ್ಲೂ ದೀಪಗಳು ಉರಿಯುತ್ತಿವೆ. ಇದರಿಂದ ಸಾರ್ವಜನಿಕ ಕೆಲಸಗಳಿಗೆ ಬಳಕೆಯಾಗುವ ಹಣ ವಿನಾಕಾರಣ ವಿದ್ಯುತ್ ಬಳಕೆಗೆ ಕಟ್ಟಬೇಕಾದ ಪರಿಸ್ಥಿತಿ ಇದೆ. ಪೂರೈಕೆಯಾಗುವ ವಿದ್ಯುತ್‌ನ್ನು ಸದ್ಬಳಕೆ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.