ನವದಹಲಿ (ಪಿಟಿಐ):  ಕೈಗಾರಿಕಾ ಪ್ರಗತಿ ಸೂಚ್ಯಂಕ (ಐಐಪಿ) ಮತ್ತು ಹಣದುಬ್ಬರ ಅಂಕಿ ಅಂಶಗಳು ಕ್ರಮವಾಗಿ ಮಾರ್ಚ್ 12 ಮತ್ತು 14ರಂದು ಪ್ರಕಟಗೊಳ್ಳಲಿವೆ. ಇದರ ಜತೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್ಐಐ) ಚಟುವಟಿಕೆ ಸಹ ಈ ವಾರ ಷೇರುಪೇಟೆ ವಹಿವಾಟಿನ ಗತಿ ನಿರ್ಧರಿಸಲಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₨5,044.54 ಕೋಟಿ ಮೌಲ್ಯದ ಷೇರು ಖರೀದಿಸಿದ್ದಾರೆ. ಚುನಾವಣೆ ದಿನಾಂಕ ಪ್ರಕಟವಾದ ನಂತರ ‘ಎಫ್ಐಐ’ ಚಟುವಟಿಕೆ ದಾಖಲೆ ಪ್ರಮಾಣದಲ್ಲಿ ಹೆಚ್ಚಿದೆ. ಚಾಲ್ತಿ ಖಾತೆ ಕೊರತೆ (ಸಿಎಡಿ) ತಗ್ಗಿರುವುದು ಮತ್ತು ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಚೇತರಿಕೆ ಕಂಡಿರುವುದೂ ಷೇರುಪೇಟೆಗೆ ಬಲ ತುಂಬಿವೆ ಎಂದು ಬೊನಾಂಜಾ ಪೋರ್ಟ್ಪೊಲಿಯೊ ಸಂಸ್ಥೆ ಹೇಳಿದೆ.

ಅಮೆರಿಕದ ಉದ್ಯೋಗ ಮಾರುಕಟ್ಟೆ ಚೇತರಿಕೆ ಕಂಡಿರುವುದು ಏಷ್ಯಾದ ಷೇರುಪೇಟೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಫೆಬ್ರುವರಿಯಲ್ಲಿ ಅಮೆರಿಕದಲ್ಲಿ ಕೃಷಿಯೇತರ ವಲಯದಲ್ಲಿ 1.75 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಈ ಅಂಕಿ ಅಂಶಗಳು ಶುಕ್ರವಾರ ಅಧಿಕೃತವಾಗಿ ಪ್ರಕಟಗೊಳ್ಳಲಿದೆ. ಸೋಮವಾರ ವಹಿವಾಟು ಆರಂಭವಾಗುತ್ತಿದ್ದಂತೆ ಏಷ್ಯಾದ ಷೇರುಪೇಟೆಗಳಲ್ಲಿ ಏರಿಕೆ ನಿರೀಕ್ಷಿಸಬಹುದು ಎಂದು ರೆಲಿಗೇರ್ ಸೆಕ್ಯುರಿಟೀಸ್ನ ಅಧ್ಯಕ್ಷ ಜಯಂತ್ ಮಂಗ್ಲಿಕ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಸೂಚ್ಯಂಕ ಹೊಸ ದಾಖಲೆ ಮಟ್ಟವಾದ 21,919 ಅಂಶಗಳಿಗೆ ಏರಿಕೆ ಕಂಡಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಕೂಡ 6,526 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿದೆ. ‘ಬಿಎಸ್ಇ’ ಒಂದು ವಾರದಲ್ಲಿ ಶೇ 3.79ರಷ್ಟು ಅಂದರೆ 800 ಅಂಶಗಳಷ್ಟು ಏರಿಕೆ ಕಂಡಿದೆ.

ಜನವರಿ ತಿಂಗಳ ಕೈಗಾರಿಕಾ ಪ್ರಗತಿ ಸೂಚ್ಯಂಕ (ಐಐಪಿ) ಮತ್ತು ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರ ಅಂಕಿ ಅಂಶಗಳು ಬುಧವಾರ ಪ್ರಕಟಗೊಳ್ಳಲಿವೆ. ಇದರ ಬೆನ್ನಿಗೇ ಶುಕ್ರವಾರದೆಂದು ಸಗಟು ಬೆಲೆ ಸೂಚ್ಯಂಕ ಆಧರಿಸಿದ (ಡಬ್ಲ್ಯುಪಿಐ) ಹಣದುಬ್ಬರ ದರ ಪ್ರಕಟಗೊಳ್ಳಲಿದೆ. ಏಪ್ರಿಲ್ 1ರಂದು ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಪರಾಮರ್ಶೆ ಪ್ರಕಟಿಸಲಿದ್ದು ಈ ಅಂಕಿ ಅಂಶಗಳು ‘ಆರ್ಬಿಐ’ ನೀತಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಮರಳಿದ ವಿಶ್ವಾಸ
‘ಎಫ್ಐಐ’ ಹೂಡಿಕೆ ಹೆಚ್ಚಿರುವುದು, ರೂಪಾಯಿ ಮೌಲ್ಯ ಸ್ಥಿರಗೊಂಡಿರುವುದು ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸಿದೆ. ಚುನಾವಣೆ ನಂತರ ಸ್ಥಿರವಾದ ಸರ್ಕಾರ ರಚನೆಯಾಗಬಹುದು ಎಂಬ ನಿರೀಕ್ಷೆ ಇರುವುದಿಂದ ಸೂಚ್ಯಂಕ ಸದ್ಯ ಏರುಗತಿಯಲ್ಲಿದೆ’ ಎಂದು ಕೊಟಕ್ ಸೆಕ್ಯುರಿಟೀಸ್ನ ಉಪಾಧ್ಯಕ್ಷ ಸಂಜೀವ್ ಜರ್ಬದೆ ಹೇಳಿದ್ದಾರೆ.

‘ಹಣದುಬ್ಬರ ಮತ್ತು ಚಾಲ್ತಿ ಖಾತೆ ಕೊರತೆ (ಸಿಎಡಿ) ತಗ್ಗಿರುವುದರಿಂದ ಈ ಬಾರಿ ‘ಆರ್ಬಿಐ’ ಅಲ್ಪಾವಧಿ ಬಡ್ಡಿ ದರ ತಗ್ಗಿಸುವ ಸಾಧ್ಯತೆ ಹೆಚ್ಚಿದೆ. ಹೂಡಿಕೆದಾರರು ಇದರ ಮೇಲೆ ನಿಗಾ ವಹಿಸುತ್ತಿದ್ದಾರೆ’ ಎಂದು ಕ್ಯಾಪಿಟಲ್ ವಯಾ ಗ್ಲೋಬಲ್ ರಿಸರ್ಚ್ ಸಂಸ್ಥೆಯ ವಿವೇಕ್ ಗುಪ್ತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.