ಬುಧವಾರ, ಜನವರಿ 22, 2020
16 °C

ಹಣದುಬ್ಬರ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪೆಟ್ರೋಲ್ ಮತ್ತು ಸಾಸಿವೆ ಎಣ್ಣೆ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ದರವು ಏಪ್ರಿಲ್ ತಿಂಗಳಲ್ಲಿ ಶೇ 10.24ಕ್ಕೆ ಇಳಿಕೆ ಕಂಡಿದೆ.ಮಾರ್ಚ್‌ನಲ್ಲಿ ಶೇ 11.44ರಷ್ಟು `ಸಿಪಿಐ' ದಾಖಲಾಗಿತ್ತು. ಮಾರ್ಚ್‌ನಲ್ಲಿ ಶೇ 13.21ರಷ್ಟಿದ್ದ ಆಹಾರ ಹಣದುಬ್ಬರ ದರ ಏಪ್ರಿಲ್‌ನಲ್ಲಿ ಶೇ 12.39ಕ್ಕೆ ತಗ್ಗಿದೆ.2011-12ನೇ ಸಾಲಿನ ಏಪ್ರಿಲ್‌ನಲ್ಲಿ ಕೈಗಾರಿಕಾ ವಲಯದ ಕಾರ್ಮಿಕರ ಹಣದುಬ್ಬರ  ಶೇ 10.2ರಷ್ಟಿತ್ತು.

ಪ್ರತಿಕ್ರಿಯಿಸಿ (+)