ಬೆಂಗಳೂರು: ಬಿಬಿಎಂಪಿಯ ಬಿಜೆಪಿ ಸದಸ್ಯೆ ಆರ್.ಮಂಜುಳಾದೇವಿ ಅವರ ಪತಿ ಶ್ರೀನಿವಾಸ್ ಕೊಲೆ ಪ್ರಕರಣ ಸಂಬಂಧ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು 12 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

‘ಪ್ರಕರಣವನ್ನು ಸಿಸಿಬಿ ವರ್ಗಾಯಿ ಸಲಾಗಿದ್ದು, ತಂಡದಲ್ಲಿ ಸ್ಥಳೀಯ ಪೊಲೀಸರೂ ಇದ್ದಾರೆ. ಘಟನೆ ಸಂಬಂಧ 12 ಮಂದಿಯನ್ನು ವಶಕ್ಕೆ ಪಡೆದು ವಿಚಾ ರಣೆ ನಡೆಸಲಾಗಿದೆ. ತನಿಖೆ ಉತ್ತಮ ಹಾದಿಯಲ್ಲಿ ಸಾಗುತ್ತಿದ್ದು, ಆರೋಪಿಗಳ ಬಗ್ಗೆಯೂ ಸುಳಿವು ಸಿಕ್ಕಿದೆ. ಶೀಘ್ರವೇ ಅವರನ್ನು ಬಂಧಿಸುವ ವಿಶ್ವಾಸವಿದೆ’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಕಮಲ್ಪಂತ್ ‘ಪ್ರಜಾವಾಣಿ’ಗೆ ತಿಳಿಸಿದರು.

‘2013ರಲ್ಲಿ ಚುನಾವಣಾ ಪ್ರಚಾ ರದ ವೇಳೆ ಶ್ರೀನಿವಾಸ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದ ಎಂಟು ಮಂದಿ ಆರೋಪಿಗಳು ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದಾರೆ. ಈ ಘಟನೆ ನಂತರ ಅವರು ತಲೆಮರೆಸಿಕೊಂ ಡಿರುವುದು ಅನುಮಾನಕ್ಕೆ ಕಾರಣ ವಾಗಿದೆ. ಹೀಗಾಗಿ ಅವರ ಪತ್ತೆ ಕಾರ್ಯ ನಡೆಯುತ್ತಿದೆ’ ಎಂದು ತನಿಖಾಧಿಕಾ ರಿಗಳು ತಿಳಿಸಿದ್ದಾರೆ.

ಸುಪಾರಿ ಕೊಲೆ?
‘ಸ್ಥಳೀಯ ರೌಡಿಗಳು ಸುಪಾರಿ ಪಡೆದು ಶ್ರೀನಿವಾಸ್ ಅವರನ್ನು ಕೊಲೆ ಮಾಡಿರುವ ಅನುಮಾನ ದಟ್ಟವಾಗಿದೆ’ ಎಂದು ಸಿಸಿಬಿ ಅಧಿಕಾರಿಗಳು ಹೇಳಿ ದ್ದಾರೆ.

‘ಸ್ಥಳೀಯ ಶಾಸಕರೊಬ್ಬರ ಆಪ್ತ ನೊಬ್ಬ ಈ ಕೊಲೆಗೆ ಸುಪಾರಿ ಕೊಟ್ಟಿರುವ ಸಾಧ್ಯತೆ ಇದೆ. ರಿಯಲ್ ಎಸ್ಟೇಟ್ ಉದ್ಯ ಮಿಯಾದ ಆತ, ಈ ಹಿಂದೆ ಶ್ರೀನಿವಾಸ್ ಅವರ ಮೇಲೆ ನಡೆದಿದ್ದ ಹಲ್ಲೆ ಪ್ರಕರ ಣದಲ್ಲೂ ಭಾಗಿಯಾಗಿದ್ದ. ಅಲ್ಲದೇ ಆವಲಹಳ್ಳಿ ಮತ್ತು ಹೊಸ ಕೋಟೆ ಠಾಣೆ ವ್ಯಾಪ್ತಿಯಲ್ಲಿ ಹಲವು ಅಪರಾಧ ಕೃತ್ಯ ಗಳನ್ನು ಎಸಗಿದ್ದಾನೆ. ರಾಮಮೂರ್ತಿ ನಗರ ಠಾಣೆಯ ರೌಡಿಗಳ ಪಟ್ಟಿಯಲ್ಲಿ ಆತನ ಹೆಸರಿದೆ’ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.

‘ಜಮೀನು, ನಿವೇಶನ ಸೇರಿದಂತೆ ₨ 200 ಕೋಟಿ ಮೌಲ್ಯದ ಆಸ್ತಿ ಹೊಂದಿ ರುವ ಆತ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಮುಖಂ ಡರ ಪರ ಪ್ರಚಾರಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದ. ಈತನೇ ಸ್ಥಳೀಯ ರೌಡಿಗಳಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಬಗ್ಗೆ ಅನುಮಾನ ದಟ್ಟವಾಗಿದೆ. ಇದೀಗ ಆತ ತಲೆಮರೆ ಸಿಕೊಂಡಿದ್ದು, ಬಾಣಸವಾಡಿ, ರಾಮ ಮೂರ್ತಿನಗರ, ಕೆ.ಆರ್.ಪುರ ಠಾಣೆ ವ್ಯಾಪ್ತಿಯ ರೌಡಿಗಳನ್ನು ಕರೆಸಿ ವಿಚಾ ರಣೆ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

ಮುಂದುವರಿದ ಬಂದ್
ಕೃಷ್ಣರಾಜಪುರ: ಬಿಬಿಎಂಪಿ ಸದಸ್ಯೆ ಮಂಜುಳಾ ದೇವಿ ಪತಿ ಶ್ರೀನಿವಾಸ್ ಕೊಲೆಯ ಹಿನ್ನೆಲೆಯಲ್ಲಿ ಪಟ್ಟಣದ ಅಂಗಡಿ ಮಾಲೀಕರು ಗುರುವಾರವೂ ಬಂದ್ ಆಚರಿಸಿದರು.

ಶ್ರೀನಿವಾಸ್ ಅವರ ಅಂತ್ಯಕ್ರಿಯೆ ಗುರುವಾರ ಅವರ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ನಡೆಯಿತು. ಬೆಳಗ್ಗಿ ನಿಂದಲೇ ಅಭಿಮಾನಿಗಳು ಆಗಮಿಸಿ ಅವರ ಅಂತಿಮ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.