ಇಸ್ಲಾಮಾಬಾದ್, (ಪಿಟಿಐ): ಹಖಾನಿ ಭಯೋತ್ಪಾದಕ ಸಂಘಟನೆಯೊಂದಿಗೆ ಐಎಸ್ಐ ಸಂಪರ್ಕ ಹೊಂದಿದೆ ಎಂಬ ಅಮೆರಿಕದ ಆಪಾದನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಅಮೆರಿಕದ ಸಂಬಂಧ ಮತ್ತಷ್ಟು ಹದಗೆಟ್ಟಿದೆ.

ಪಾಕಿಸ್ತಾನ ಪ್ರಧಾನಿ ಯುಸೂಫ್ ರಜಾ ಗಿಲಾನಿ ಅವರು ತಮ್ಮ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖರ್ ಅವರಿಗೆ ಅಮೆರಿಕ ಪ್ರವಾಸವನ್ನು ಮೊಟಕುಗೊಳಿಸಿ ವಾಪಸಾಗುವಂತೆ ಸೂಚಿಸಿದ್ದಾರೆ ಹಾಗೂ ಪಾಕಿಸ್ತಾನ ಸೇನೆಯು ಅಮೆರಿಕದ ಆಪಾದನೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಖರ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಲು ನ್ಯೂಯಾರ್ಕ್ಗೆ ತೆರಳಿದ್ದು, ಪ್ರವಾಸವನ್ನು ಮೊಟಕುಗೊಳಿಸಿ ಕೂಡಲೇ ವಾಪಸಾಗುವಂತೆ ಪ್ರಧಾನಿ ಅವರು ಸೂಚಿಸಿರುವುದು ಎರಡೂ ದೇಶಗಳ ಮಧ್ಯೆಯ ಸಂಬಂಧ ಪೂರ್ತಿ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ.

ಗಿಲಾನಿ ಅವರೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು ಆದರೆ ಅವರು ಕೊನೆಗಳಿಗೆಯಲ್ಲಿ ತಮ್ಮ ಪ್ರವಾಸವನ್ನು ರದ್ದುಪಡಿಸಿ ವಿದೇಶಾಂಗ ಸಚಿವೆಯನ್ನು ಅಲ್ಲಿಗೆ ಕಳುಹಿಸಿದ್ದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಒಬಾಮ ಅವರು ಗಿಲಾನಿ ಅವರನ್ನು ಭೇಟಿ ಮಾಡದೆ ಇರಲು ನಿರ್ಧರಿಸಿದ್ದೇ ಗಿಲಾನಿ ಅವರ ಅಮೆರಿಕ ಪ್ರವಾಸ ರದ್ದಾಗಲು ಮುಖ್ಯ ಕಾರಣ ಎನ್ನಲಾಗಿದೆ.

ಅಫ್ಘಾನಿಸ್ತಾನದಲ್ಲಿಯ ಅಮೆರಿಕ ರಾಯಭಾರ ಕಚೇರಿಯ ಮೇಲೆ ಹಖಾನಿ ಉಗ್ರರು ದಾಳಿ ಮಾಡಿದ ನಂತರ ಅಮೆರಿಕ ಈ ಸಂಘಟನೆಗೆ ಪಾಕಿಸ್ತಾನದ ಐಎಸ್ಐ ಸಂಪರ್ಕವಿದೆ ಎಂದು ಆಪಾದಿಸಿತ್ತು. ಇದಾದ ನಂತರ ಎರಡೂ ರಾಷ್ಟ್ರಗಳ ಮಧ್ಯೆಯ ಸಂಬಂಧ ಬಿಗಡಾಯಿಸುತ್ತ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.