ಮಂಗಳವಾರ, ಮೇ 11, 2021
19 °C

ಹನುಮನಾಳದಲ್ಲಿ ಬಾಲ್ಯ ವಿವಾಹ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಗಿರಿ: ಕೊಪ್ಪಳ ಜಿಲ್ಲೆಯ ಕನಕಗಿರಿ ಸಮೀಪದ ಹನುಮನಾಳ ಗ್ರಾಮದ ಶ್ರೀ ಬಸವಲಿಂಗೇಶ್ವರ ದೇಶಿಕೇಂದ್ರದ ಶಿವಯೋಗಿಗಳ ಅವರ ಜಾತ್ರಾ ಮಹೋತ್ಸವದಲ್ಲಿ ಮೂರು ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ಬಗ್ಗೆ ತಿಳಿದು ಬಂದಿದೆ.ಸೋಮವಾರ ಊಟಗನೂರು ಮರಿ ಬಸವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ 11 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ಮೂರ‌್ನಾಲ್ಕು ಜೋಡಿಗಳು ಅಪ್ರಾಪ್ತ ವಯಸ್ಕರಾಗಿದ್ದರು ಎಂದು ತಿಳಿದು ಬಂದಿದೆ. ಹನುಮನಾಳ ಗ್ರಾಮದ ಭಕ್ತರ ಹೆಸರಿನಲ್ಲಿ ನಡೆದ ಈ ಮದುವೆಯ ಸಂಘಟಕರು ಬಾಲ್ಯ ವಿವಾಹಕ್ಕೆ ಅವಕಾಶ ಇಲ್ಲ ಎಂದು ಕರಪತ್ರ ಹಾಕಿಸಿದ್ದರೂ ಉಪಯೋಗವಾಗಲಿಲ್ಲ, ಶಿರಿವಾರ ಗ್ರಾಮದ ದುರಗಪ್ಪ ಅವರೊಂದಿಗೆ ವಿವಾಹದ ಅದೇ ಗ್ರಾಮದ ಹನುಮಂತಿಗೆ ಇನ್ನು ಹದಿನೆಂಟು ವಯಸು ಆಗಿರಲಿಲ್ಲ, ಅಲ್ಲದೆ ಈ ಸಮಯದಲ್ಲಿ ಮದುವೆಯಾದ ಇನ್ನೇರಡು ಜೋಡಿಗಳು ಸರ್ಕಾರದ ಕಾನೂನು ಪ್ರಕಾರ 18 ವಯಸು ತುಂಬಿರಲಿಲ್ಲ ಎಂದು ಅಲ್ಲಿ ಹಾಜರಿದ್ದ ಕೆಲವರು ಮಾಹಿತಿ  ನೀಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.