ಗುರುವಾರ , ಜೂನ್ 17, 2021
23 °C

ಹರಿಹರ ಮಾಜಿ ಶಾಸಕ ಬಿ.ಪಿ ಹರೀಶ್ ಕಾಂಗ್ರೆಸ್‌ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ:  ಮಾಜಿ ಮುಖ್ಯಮಂತ್ರಿ ಬಿ.­ಎಸ್.­­ಯಡಿಯೂರಪ್ಪ ಅವರ ಆಪ್ತವಲ­ಯ­ದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಶಾಸಕ ಬಿ.ಪಿ. ಹರೀಶ್ ಕಾಂಗ್ರೆಸ್ ಸೇರು­ವುದು ಖಚಿತವಾಗಿದ್ದು, ಮಂಗಳವಾರ ಮುಹೂರ್ತ ನಿಗದಿಯಾಗಿದೆ.



ನಗರಸಭೆ ಸದಸ್ಯ ಸೈಯದ್ ರೆಹ­ಮಾನ್ ಅವರ ಕಚೇರಿ­ಯಲ್ಲಿ ಭಾನು­ವಾರ ಬಿ.ಪಿ.ಹರೀಶ್ ಕರೆದಿದ್ದ ಆಪ್ತರ ಸಭೆ­­ಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುವ ಬಗ್ಗೆ ತೀರ್ಮಾ­ನಿಸಲಾಯಿತು ಎಂದು ತಿಳಿದುಬಂದಿದೆ.



ಆರಂಭದಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಅವರ ಆಪ್ತರು ವಿರೋಧಿಸಿದರು. ಆದರೆ ನಂತರ ಹರೀಶ್ ಮಾತಿಗೆ ಮಣಿದು ಅರೆ­ಮನಸ್ಸಿನಿಂದ ಒಪ್ಪಿದರು.



ರಾಜ್ಯ ಬಿಜೆಪಿ ನಾಯಕರ ನಿರ್ಲಕ್ಷ್ಯ ಹಾಗೂ ಬೆಂಬಲಿಗರಿಗೆ ತಾಲ್ಲೂಕು ಬಿಜೆಪಿ ಮುಖಂಡರು ತೋರಿದ ಅಗೌರ­ವ­ದಿಂದ ಬೇಸರಗೊಂಡು ಹರೀಶ್ ಈ ತೀರ್ಮಾ­ನಕ್ಕೆ ಬಂದಿದ್ದಾರೆ ಎಂದು ಅವರ ಬೆಂಬಲಿಗರೊಬ್ಬರು ತಿಳಿಸಿದರು.



ಸಭೆಯ ನಂತರ ಸ್ಥಳಕ್ಕೆ, ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ್‌ ಪತ್ನಿ ಪ್ರಭಾ, ಕಾಂಗ್ರೆಸ್ ಮುಖಂಡ ಎಸ್.ರಾಮಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಬೆಣ್ಣಿಹಳ್ಳಿ ಹಾಲೇಶಪ್ಪ, ಎಂ.­ನಾಗೇಂದ್ರಪ್ಪ, ತಾಲ್ಲೂಕು ಪಂಚಾಯ್ತಿ ಸದ­ಸ್ಯ­ರಾದ ಡಿ.ಕುಮಾರ್, ಎಚ್.­ಎಚ್.­ಬಸವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಸಿಗ್ಬತ್ಉಲ್ಲಾ ಮೊದ­ಲಾದ ಕಾಂಗ್ರೆಸ್ ಮುಖಂಡರು ಆಗ­ಮಿಸಿ ಹರೀಶ್‌ಗೆ ಶುಭ ಹಾರೈಸಿ, ಕಾಂಗ್ರೆ­ಸ್‌ಗೆ ಸ್ವಾಗತಿಸಿದ್ದು ಅವರ ಸೇರ್ಪಡೆಯನ್ನು ಖಚಿತಗೊಳಿಸಿತು.



ಹರೀಶ್ ನಡೆ ಲೋಕಸಭೆ ಚುನಾ­ವ­ಣೆ­­ಯಲ್ಲಿ ಯಾವ ಪರಿಣಾಮ ಬೀರ­ಬ­ಹುದು ಎನ್ನುವುದು ಸದ್ಯ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.