ಬುಧವಾರ, ಜನವರಿ 22, 2020
28 °C

ಹಳೆ ವಿದ್ಯಾರ್ಥಿಗಳ ಪುನರ್ಮಿಲನ, ಗುರುವಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲ್ಲೇಶ್ವರದ ಎಂ.ಇ.ಎಸ್. ಕಾಲೇಜಿನಲ್ಲಿ 1969-72ರಲ್ಲಿ ಪ್ರಥಮ ವರ್ಷದ ವಿಜ್ಞಾನ ಪದವಿ ಪಡೆದು  ಹೊರಹೋದ ಹಳೆ ವಿದ್ಯಾರ್ಥಿಗಳ ಪುನರ್‌ಮಿಲನ ಮತ್ತು ಗುರುವಂದನೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. 1972ರಲ್ಲಿ ಬಿ.ಎಸ್‌ಸಿ. ಮುಗಿಸಿ ಹೊರಹೋದ ಸುಮಾರು 60 ವಿದ್ಯಾರ್ಥಿಗಳು ತಮ್ಮ ಪ್ರಾಧ್ಯಾಪಕರಿಗೆ ಗುರುವಂದನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಕೆ.ವಿ. ರಾಜಗೋಪಾಲ, ಪ್ರೊ. ಬಿ.ಆರ್.ಎಸ್. ಅಯ್ಯಂಗಾರ್ ಹಾಗೂ ನಿವೃತ್ತ ಪ್ರಾಧ್ಯಾಪಕರು ಮತ್ತು ಪ್ರಸಕ್ತ ಪ್ರಾಂಶುಪಾಲರಾದ ಪ್ರೊ. ಜೆ. ಶ್ರೀನಿವಾಸ ಮೂರ್ತಿ ವೇದಿಕೆಯಲ್ದ್ದ್‌ದರು. ಕಾಲೇಜಿನ ಪ್ರಮುಖರಾದ ವಿದ್ಯಾಸಾಗರ, ದಿ.ಎಂ.ಪಿ.ಎಲ್. ಶಾಸ್ತ್ರಿ ಸೇರಿದಂತೆ ಅಗಲಿದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಒಂದು ನಿಮಿಷದ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.ಹಳೆ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಕ್ಯಾಲಿಫೋರ್ನಿಯಾ ನಿವಾಸಿ ನರಸಿಂಹ ಮೂರ್ತಿ, ಪುಣೆ ನಿವಾಸಿ ಎಚ್.ಎಸ್. ಭಾಸ್ಕರ್ ಮುಂತಾದವರು ಹಳೆಯ ನೆನಪುಗಳನ್ನು ಹಂಚಿಕೊಂಡರು. ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರತಿಕ್ರಿಯಿಸಿ (+)