ಮಂಗಳವಾರ, ಜುಲೈ 14, 2020
26 °C

ಹಸನ್ ಅಲಿ ವಿರುದ್ದ ಭಯೋತ್ಪಾದನೆ ಆರೋಪ - ಸುಪ್ರೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಸನ್ ಅಲಿ ವಿರುದ್ದ ಭಯೋತ್ಪಾದನೆ ಆರೋಪ - ಸುಪ್ರೀಂ

ನವದೆಹಲಿ (ಪಿಟಿಐ/ಐಎಎನ್ಎಸ್): ವಿದೇಶಿ ಬ್ಯಾಂಕುಗಳಲ್ಲಿ ಅಪಾರ ಪ್ರಮಾಣದ ಕಪ್ಪುಹಣ ತೊಡಗಿಸಿರುವ ಆರೋಪದ ಮೇರೆಗೆ ಬಂಧಿಸಲಾಗಿರುವ ಪುಣೆ ಮೂಲದ ಕುದುರೆ ತಳಿಕೇಂದ್ರದ ಮಾಲೀಕ ಹಸನ್ ಅಲಿಖಾನ್ ಹೊಂದಿರುವ ನಕಲಿ ಪಾಸ್ ಪೋರ್ಟ್ ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್ ಆತನ ವಿರದ್ದ ಭಯೋತ್ಪಾದನೆಯ ಆರೋಪವನ್ನು ಏಕೆ  ಹೊರಿಸಬಾರದು ಎಂದು ಕೇಂದ್ರ ಸರ್ಕಾರವನ್ನು ಕೇಳಿದೆ.

ಭಯೋತ್ಪಾದಕರ ಜತೆ ಸಂಪರ್ಕ ಹೊಂದಿರುವ ಶಸ್ತ್ರಾಸ್ತ್ರ ತಯಾರಿಕಾ ಕಂಪೆನಿಗಳ ಜತೆ ಹಸನ್ ಅಲಿ ಸಂಪರ್ಕ ಹೊಂದಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಬಿ. ಸುದರ್ಶನ್ ರೆಡ್ಡಿ ಹಾಗೂ ಎಸ್.ಎಸ್ ನಿಜ್ಜರ್ ಅವರೊನ್ನೊಳಗೊಂಡ ನ್ಯಾಯಪೀಠ ಹಸನ್ ಅಲಿ ಮೇಲೆ ಭಯೋತ್ಪಾದನೆ ಸಂಚಿನಂತಹ ಕಠಿಣ ಆರೋಪಗಳನ್ನು ಹೊರಿಸಬೇಕೆಂದು ಅಭಿಪ್ರಾಯ ಪಟ್ಟಿತು.ಸುಪ್ರಸಿದ್ದ ವಕೀಲರಾದ ರಾಮ್ ಜೇಠಮಲಾನಿ ಅವರು ವಿದೇಶಗಳಲ್ಲಿ ಕಪ್ಪುಹಣ ಇಟ್ಟಿರುವ ಸಂಬಂಧ ತನಿಖೆ ನಡೆಸಿ ಅಂತಹ ಹಣವನ್ನು ದೇಶಕ್ಕೆ ವಾಪಸ್ ತರಬೇಕೆಂದು ಕೋರಿ  ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಪೀಠ ಮೇಲಿನಂತೆ ಅಭಿಪ್ರಾಯಪಟ್ಟಿತು. ಅಲ್ಲದೆ ಜಾರಿ ನಿರ್ದೇಶನಾಲಯಕ್ಕೆ ತನಿಖೆಯ ಪ್ರಗತಿಯ ಬಗೆಗೆ ವರದಿ ನೀಡುವಂತೆ ಸೂಚನೆ ನೀಡಿತು.

ಸೋಮವಾರ ರಾತ್ರಿ ಬಂಧನಕ್ಕೊಳಗಾಗಿರುವ ಹಸನ್ ಅಲಿಯನ್ನು ಮಂಗಳವಾರ ಮುಂಬೈನ ಜೆ.ಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ನಂತರ ಮಂಗಳವಾರ ಮಧ್ಯಾಹ್ನ ಆತನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.