ಶುಕ್ರವಾರ, ಏಪ್ರಿಲ್ 16, 2021
31 °C

ಹಸಿರು ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆನಡಿಯನ್ ಇಂಟರ್‌ನ್ಯಾಷನಲ್ ಸ್ಕೂಲ್ ಆಯೋಜಿಸಿದ್ದ ದ್ವಿತೀಯ ಹಸಿರು ಸಮ್ಮೇಳನದಲ್ಲಿ ನಗರದ ವಿವಿಧ ಶಾಲೆಗಳಿಂದ 14 ಯುವ ಪರಿಸರ ವಿಜ್ಞಾನಿಗಳು ಭಾಗವಹಿಸಿದ್ದರು.ಸಮತೋಲಿತ ಪರಿಸರ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ನಮ್ಮ ಮುಂದಿರುವ ಸವಾಲುಗಳನ್ನು ಕುರಿತು ಯುವ ವಿಜ್ಞಾನಿ ವಿದ್ಯಾರ್ಥಿಗಳು ಈ ವೇಳೆ ಚರ್ಚಿಸಿ ವಿನಿಮಯ ಮಾಡಿಕೊಂಡರು. ಪ್ರಸ್ತುತ ಎದುರಿಸುತ್ತಿರುವ ಪರಿಸರ ಸಂಬಂಧಿ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರೋಪಾಯಗಳನ್ನು ಕುರಿತು ಚರ್ಚಿಸುವುದರ ಜತೆಗೆ ಪರಿಸರ ಸಂರಕ್ಷಣೆಯಲ್ಲಿ ಎನ್‌ಜಿಒಗಳ ಪಾತ್ರ, ಪರಿಸರ ತಜ್ಞರು ಹಾಗೂ ನಾಗರಿಕರ, ಪಾಲ್ಗೊಳ್ಳುವಿಕೆ ಮೇಲೂ ಬೆಳಕು ಚೆಲ್ಲಲಾಯಿತು.ಉತ್ತರ ಧ್ರುವದ ರಕ್ಷಣೆ, ಹುಲಿ ಸಂರಕ್ಷಣೆ, ನಗರವನ್ನು ಕಾಡುತ್ತಿರುವ ಕಸದ ಸಮಸ್ಯೆ, ಸಮರ್ಥ ಪರಿಸರ ವ್ಯವಸ್ಥೆ ನಿರ್ವಹಣೆ, ಪುನರ್ಬಳಕೆ ಕುರಿತಂತೆ ತಾವು ಅನ್ವೇಷಣೆ ಮಾಡಿದ ಹೊಸ ತಂತ್ರಜ್ಞಾನವನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಿದರು.ಟಿಐಎಸ್‌ಬಿ, ವಿದ್ಯಾಶಿಲ್ಪ, ಲೆಗೆಸಿ, ಟ್ರಿಯೊ, ಡಿಪಿಎಸ್ ಹಾಗೂ ಪ್ರೆಸಿಡೆನ್ಸಿ ಶಾಲೆಯಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳು ಕೆನೆಡಿಯನ್ ಸ್ಕೂಲ್ ಮಕ್ಕಳ ಜತೆ ಸೇರಿ ಶಾಲೆಯ ಆವರಣದಲ್ಲಿ ಗುಲಾಬಿ ತೋಟ ನಿರ್ಮಾಣಕ್ಕೆ ಮುಂದಾದರು. ವಿದ್ಯಾರ್ಥಿಗಳೆಲ್ಲರೂ ಕೂಡಿ 37 ಗುಲಾಬಿ ಗಿಡಗಳನ್ನು ನೆಟ್ಟು ಖುಷಿ ಪಟ್ಟರು.  

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.