ನವದೆಹಲಿ (ಪಿಟಿಐ): ನಾಯಕ ಭರತ್ ಚೆಟ್ರಿ ಸೇರಿದಂತೆ ಕರ್ನಾಟಕದ ಏಳು ಮಂದಿ ಆಟಗಾರರು ಮುಂಬರುವ ಒಲಿಂಪಿಕ್ಸ್ ಅರ್ಹತಾ ಹಾಕಿ ಟೂರ್ನಿಗಾಗಿ ಆಯ್ಕೆ ಮಾಡಲಾಗಿರುವ ಭಾರತ ಸಂಭವನೀಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಚೆಟ್ರಿ, ಮಾಜಿ ನಾಯಕ ಅರ್ಜುನ್ ಹಾಲಪ್ಪ, ಹಿರಿಯ ಆಟಗಾರರಾದ ಎಸ್.ವಿ.ಸುನಿಲ್, ಇಗ್ನೇಸ್ ಟರ್ಕಿ, ವಿ.ಆರ್.ರಘುನಾಥ್, ಯುವ ಆಟಗಾರರಾದ ವಿ.ಎಸ್.ವಿನಯ್ ಹಾಗೂ ಎಸ್.ಕೆ.ಉತ್ತಪ್ಪ ಅವರು 32 ಮಂದಿ ಸಂಭವನೀಯ ಆಟಗಾರರ ಪಟ್ಟಿಯಲ್ಲಿದ್ದಾರೆ.

ಇತ್ತೀಚೆಗಷ್ಟೇ ಕೊನೆಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಹಾಕಿ ಟೆಸ್ಟ್ ಸರಣಿಯಲ್ಲಿ ಭಾರತ 3-1ರಲ್ಲಿ ಗೆಲುವು ಸಾಧಿಸಿತ್ತು. ಇದರಲ್ಲಿ ತೋರಿದ ಪ್ರದರ್ಶನ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಲಾಗಿದೆ. ಗಾಯಗೊಂಡಿರುವ ಗುರ್ಬಜ್ ಸಿಂಗ್ ಅವರನ್ನು ಕೈಬಿಡಲಾಗಿದೆ.

ಹಾಕಿ ಆಟಗಾರರ ಸಂಭವನೀಯ ಪಟ್ಟಿಯನ್ನು ಅಂತಿಮವಾಗಿ 18 ಕ್ಕೆ ಸಿಮೀತಗೊಳಿಸಲಾಗುತ್ತದೆ. ಒಲಿಂಪಿಕ್ಸ್ ಅರ್ಹತಾ ಸುತ್ತಿನ ಟೂರ್ನಿ ನವದೆಹಲಿಯಲ್ಲಿ ಫೆಬ್ರುವರಿ 18ರಿಂದ 26ರವರೆಗೆ ನಡೆಯಲಿದೆ ಹಾಕಿ ಇಂಡಿಯಾ ತಿಳಿಸಿದೆ.

ತಂಡ ಇಂತಿದೆ: ಗೋಲ್ಕೀಪರ್ಗಳು: ಭರತ್ ಚೆಟ್ರಿ ಹಾಗೂ ಪಿ.ಆರ್.ಶ್ರೀಜೇಶ್. ಡಿಫೆಂಡರ್ಸ್: ಸಂದೀಪ್ ಸಿಂಗ್, ವಿ.ಆರ್.ರಘುನಾಥ್, ರೂಪಿಂದರ್ಪಾಲ್ ಸಿಂಗ್, ಹರ್ಬಿರ್ ಸಿಂಗ್, ಗುರ್ಜಿಂದರ್ ಸಿಂಗ್, ಮಂಜೀತ್ ಕುಲ್ಲು. ಮಿಡ್ಫೀಲ್ಡರ್: ಸರ್ದಾರ್ ಸಿಂಗ್, ವಿಕ್ರಮ್ ಪಿಳ್ಳೈ, ವಿಕಾಸ್ ಶರ್ಮ, ಅರ್ಜುನ್ ಹಾಲಪ್ಪ, ಮನ್ಪ್ರೀತ್ ಸಿಂಗ್, ವಿ.ಎಸ್.ವಿನಯ್, ಕೊತಾಜಿತ್ ಸಿಂಗ್, ಇಗ್ನೇಸ್ ಟರ್ಕಿ, ಬಿರೇಂದ್ರ ಲಾಕ್ರಾ. ಫಾರ್ವರ್ಡ್ಸ್: ರಾಜ್ಪಾಲ್ ಸಿಂಗ್, ಎಸ್.ವಿ.ಸುನಿಲ್, ಸರವಣಜಿತ್ ಸಿಂಗ್, ಶಿವೇಂದ್ರ ಸಿಂಗ್, ಗುರ್ವಿಂದರ್ ಸಿಂಗ್ ಚಾಂದಿ, ತುಷಾರ್ ಖಾಂಡೇಕರ್, ಎಸ್.ಕೆ.ಉತ್ತಪ್ಪ, ರವಿಪಾಲ್, ಚಿಂಗ್ಲೆನ್ಸನಾ ಸಿಂಗ್, ಯುವರಾಜ್ ವಾಲ್ಮೀಕಿ, ಮನ್ದೀಪ್ ಅಂಟಿಲ್, ಧರ್ಮವೀರ್ ಸಿಂಗ್, ಭರತ್, ದನೀಶ್ ಮುಜ್ತಾಬಾ ಹಾಗೂ ಅಕ್ಷದೀಪ್ ಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.