ಗುರುವಾರ , ಜನವರಿ 23, 2020
28 °C

ಹಾಕಿ: ಬಿಇಎಂಎಲ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸುರೇಂದ್ರ ಗಳಿಸಿದ `ಹ್ಯಾಟ್ರಿಕ್~ ಗೋಲುಗಳ ನೆರವಿನಿಂದ ಬೆಂಗಳೂರಿನ ಬಿಇಎಂಎಲ್ ತಂಡದವರು ಇಲ್ಲಿ ನಡೆಯುತ್ತಿರುವ ಡಿ.ಎಸ್. ಮೂರ್ತಿ ಹಾಗೂ ವಿ.ಕರುಣಾಕರನ್ ಸ್ಮಾರಕ ರಾಜ್ಯ ಮಟ್ಟದ ಹಾಕಿ ಟೂರ್ನಿಯ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ (ಕೆಎಸ್‌ಎಚ್‌ಎ) ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬಿಇಎಂಎಲ್ 4-0ಗೋಲುಗಳಿಂದ ಆರ್‌ಬಿಐ ತಂಡವನ್ನು ಮಣಿಸಿತು. ವಿಜಯಿ ತಂಡದ ಸುರೇಂದ್ರ 29ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದು 1-0ರಲ್ಲಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಇದಾದ ನಂತರ 39 ಹಾಗೂ 49ನೇ ನಿಮಿಷದಲ್ಲಿ ಮತ್ತೆರೆಡು ಸಲ ಚೆಂಡನ್ನು ಗೋಲಿನ ಪೆಟ್ಟಿಗೆಗೆ ಸೇರಿಸಿದರು. ಈ ಆಟಗಾರನಿಗೆ ತಕ್ಕ ಸಾಥ್ ನೀಡಿ ಸುಬ್ಬಯ್ಯ 58ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿದರು.ಎಚ್‌ಎಎಲ್ ಇನ್ನೊಂದು ಪಂದ್ಯದಲ್ಲಿ 8-1ಗೋಲುಗಳಿಂದ ಎಬಿಎಚ್‌ಎ ತಂಡವನ್ನು ಸೋಲಿಸಿತು.

ಬಿಇಎಂಎಲ್-ಎಸ್‌ಎಐ ಹಾಗೂ ಆರ್‌ಬಿಐ-ಐಡಿಯಲ್ ಸ್ಪೋರ್ಟ್ಸ್ ಕ್ಲಬ್ ತಂಡಗಳು ಬುಧವಾರ ಪೈಪೋಟಿ ನಡೆಸಲಿವೆ.

ಪ್ರತಿಕ್ರಿಯಿಸಿ (+)