ಮಂಗಳವಾರ, ಮೇ 11, 2021
27 °C

ಹಾಕಿ: ಸೆಮಿಫೈನಲ್‌ಗೆ ಭಾರತ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ ಬಾಲಕಿಯರ ತಂಡದವರು ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ (18 ವರ್ಷ ವಯಸ್ಸಿನೊಳಗಿನವರ) ಹಾಕಿ ಟೂರ್ನಿಯಲ್ಲಿ ಸತತ ಮೂರನೇ ಗೆಲುವು ಪಡೆದು ಸೆಮಿಫೈನಲ್ ಪ್ರವೇಶಿಸಿದರು.ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ 4-2 ರಲ್ಲಿ ಚೀನಾ ವಿರುದ್ಧ ಜಯ ಸಾಧಿಸಿತು. ವಿರಾಮದ ವೇಳೆಗೆ 2-0 ರಲ್ಲಿ ಮುನ್ನಡೆ ಸಾಧಿಸಿದ್ದ ವಿಜಯಿ ತಂಡದ ಪರ ನವಜೋತ್ ಕೌರ್ (11ನೇ ನಿಮಿಷ), ಲಿಲಿಮಾ ಮಿಂಜ್ (34), ಪೂನಮ್ ರಾಣಿ (49) ಮತ್ತು ಅನುಪಾ ಬಾರ್ಲ (66) ಚೆಂಡನ್ನು ಗುರಿ ಸೇರಿಸಿದರು.ಸೊಂಗ್ ಕ್ಸಿಯಾ ಒಮಿಂಗ್ (60) ಹಾಗೂ ಲಿಯಾಂಗ್ ಕ್ಸು (63) ಗೋಲು ಗಳಿಸಿ ಚೀನಾ ತಂಡದ ಸೋಲಿನ ಅಂತರ ತಗ್ಗಿಸಿದರು. ಈ ಗೆಲುವಿನ ಮೂಲಕ `ಬಿ~ ಗುಂಪಿನಲ್ಲಿ ಒಟ್ಟು ಒಂಬತ್ತು ಪಾಯಿಂಟ್‌ಗಳೊಂದಿಗೆ ಭಾರತ ನಾಲ್ಕರಘಟ್ಟಕ್ಕೆ ಅರ್ಹತೆ ಪಡೆಯಿತು.ಭಾರತದ ಬಾಲಕಿಯರು ಮೊದಲ ಪಂದ್ಯದಲ್ಲಿ 12-0 ರಲ್ಲಿ ಕಜಕಸ್ತಾನ ವಿರುದ್ಧ ಗೆಲುವು ಪಡೆದಿದ್ದರೆ, ಆ ಬಳಿಕ 13-0 ರಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ್ದರು. ಗುರುವಾರ ನಡೆಯುವ ಕೊನೆಯ ಲೀಗ್ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು ಎದುರಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.