ಶುಕ್ರವಾರ, ಮೇ 14, 2021
35 °C

ಹಾಕಿ: ಹುಬ್ಬಳ್ಳಿ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ ರಾಜ್ಯ `ಎ~ ಡಿವಿಷನ್ ಹಾಲಿ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಗೆಲುವು ಸಾಧಿಸಿ ಮುನ್ನಡೆದಿದ್ದಾರೆ.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ  ಕ್ರೀಡಾಂಗಣದಲ್ಲಿ  ಶುಕ್ರವಾರ ನಡೆದ ಪಂದ್ಯದಲ್ಲಿ ಸೌತ್ ವೆಸ್ಟರ್ನ್ ರೈಲ್ವೆ ತಂಡ 2-1 ಗೋಲುಗಳಿಂದ ಬೆಂಗಳೂರಿನ ಎಂಇಜಿ ಬಾಯ್ಸ ತಂಡದ ವಿರುದ್ಧ ವೀರೋಚಿತ ಗೆಲುವು ಸಾಧಿಸಿತು. ಮೂರು ಗೋಲುಗಳು ಪಂದ್ಯದ ಪೂರ್ವಾರ್ಧದಲ್ಲಿ ಬಂದುವು.ಉತ್ತಮ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಸೌತ್ ವೆಸ್ಟರ್ನ್ ರೈಲ್ವೆ ತಂಡ ಆಟ ಆರಂಭದಲ್ಲಿ ಮೇಲುಗೈ ಪಡೆದಿದ್ದರು. ಪಂದ್ಯದ ಉತ್ತರಾರ್ಧದಲ್ಲಿ ಉಭಯ ತಂಡದವರು ದಾಳಿಗೆ ಪ್ರತಿದಾಳಿ ನಡೆಸಿ ಪ್ರೇಕ್ಷಕರ ಗಮನ ಸೆಳೆದಿದ್ದರು. ವಿಜಯಿ ತಂಡದ ಮಂಜುನಾಥ್ ಜಾಧವ್, ರವಿ ಮುತಗಾರ್ ಹಾಗೂ ಎದುರಾಳಿ ತಂಡದ ಜಿತೇಂದರ್ ಚೆಂಡನ್ನು ಗುರಿಮುಟ್ಟಿಸಿದರು.ನಾಳೆ (ಶನಿವಾರ) ಮಧ್ಯಾಹ್ನ 2-30ಕ್ಕೆ ಫ್ಲೈಯಿಂಗ್ ಹಾಕಿ ಕ್ಲಬ್-ಐಟಿಐ ಆನಂತರ ಮಧ್ಯಾಹ್ನ 4-00ಕ್ಕೆ ಕೂರ್ಗ್ ಬ್ಲೂಸ್ ಹಾಕಿ ಸಂಸ್ಥೆ-ರೈಲ್ವೆ ಗಾಲಿ ಕಾರ್ಖಾನೆ ನಡುವೆ ಪಂದ್ಯ ನಡೆಯಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.