ಬುಧವಾರ, ಜನವರಿ 22, 2020
16 °C

ಹಾಲಿ, ಮಾಜಿ ಶಾಸಕರ ವಿರುದ್ಧ ದೂರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಸಿ.ವಿ.ರಾಮನ್‌ನಗರ ಶಾಸಕ ರಘು, ಮಾಜಿ ಶಾಸಕ ಸುರಾನ ಹಾಗೂ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ನಾಗರಾಜ್ ವಿರುದ್ಧ ಪುಲಿಕೇಶಿನಗರ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.ರಸ್ತೆ ಅಗಲೀಕರಣಕ್ಕಾಗಿ ಸೆಂಟ್ ಕ್ಲಾರೆನ್ಸ್ ಶಾಲೆಗೆ ಸೇರಿದ ಆವರಣವನ್ನು ಬಳಸಿಕೊಳ್ಳುವ ಮೂಲಕ ಅತಿಕ್ರಮ ಪ್ರವೇಶ ಮಾಡಲಾಗುತ್ತಿದೆ ಆದ್ದರಿಂದ ಆಟದ ಮೈದಾನವನ್ನು ರಕ್ಷಿಸುವಂತೆ ಶಾಲೆಯ ಪ್ರಾಂಶು ಪಾಲರಾದ ಜೋಸೆಫ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀ ಸರು ತಿಳಿಸಿದರು.

 

1949ರಲ್ಲಿ ಬಿಬಿಎಂಪಿಯು ಈ ಆವರಣವನ್ನು ಸೈಂಟ್ ಕ್ಲಾರೆನ್ಸ್ ಶಾಲೆಗೆ ನೂರು ವರ್ಷದ ಅವಧಿಗೆ ಗುತ್ತಿಗೆ ನೀಡಿತ್ತು. ಆದರೆ  ಅವಧಿ ಪೂರ್ಣಗೊಳ್ಳುವ ಮುನ್ನವೆ ರಘು ಅವರು ರಸ್ತೆ ಅಗಲೀಕರಣ ಕಾಮಗಾರಿಗೆ ಶಾಲೆಯ ಆವರಣವನ್ನು ಬಳಸಿಕೊಂಡಿದ್ದಾರೆ. ಗುತ್ತಿಗೆಯ ಮಾಹಿತಿಯಿಲ್ಲದ ನಾಗರಾಜ್ ಅವರು ಸೋಮವಾರದಿಂದ ರಸ್ತೆಕಾಮ ಗಾರಿಯನ್ನು ಆರಂಬಿಸಿದ್ದಾರೆ ಎಂದು ಆರೋಪಿಸಲಾಗಿದೆ.

 

ಪ್ರತಿಕ್ರಿಯಿಸಿ (+)