ಗುರುವಾರ , ಮೇ 19, 2022
23 °C

ಹಾಲು ಉತ್ಪಾದಕರ ಮಕ್ಕಳಿಗೆ ಶೈಕ್ಷಣಿಕ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಒಕ್ಕೂಟದಿಂದ ಕೊಡುವ ಹಣವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಫಲಿತಾಂಶ ಕಾಣಬೇಕು ಎಂದು ಬಮೂಲ್ ನಿರ್ದೇಶಕ ಎಸ್. ಲಿಂಗೇಶ್‌ಕುಮಾರ್ ತಿಳಿಸಿದರು.ಹಾಲು ಒಕ್ಕೂಟದ ಕಚೇರಿಯಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಅಂಗವಾಗಿ ಚೆಕ್ ನೀಡಿ ಮಾತನಾಡುತ್ತಾ ತಾಲ್ಲೂಕಿನಾದ್ಯಂತ ಹಸು ಸಾಕಾಣಿಕೆಯಲ್ಲಿ ತೊಡಗಿರುವ ರೈತರ ಸುಮಾರು 223 ವಿದ್ಯಾರ್ಥಿಗಳಿಗೆ 10ಲಕ್ಷದ 10 ಸಾವಿರ ರೂಗಳನ್ನು ಮೀಸಲಿಟ್ಟಿದ್ದು. ಹಾಲು ಸರಬರಾಜು ಮಾಡುವ ಸದಸ್ಯರ ಮಕ್ಕಳ ಅರ್ಜಿಗಳನ್ನು ಒಕ್ಕೂಟದ ಕಚೇರಿಯಲ್ಲಿ ಪಡೆದು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಅಕ್ಟೋಬರ್ ಅಂತ್ಯಕ್ಕೆ ಕಚೇರಿಗೆ ಸಲ್ಲಿಸಬೇಕೆಂದು ತಿಳಿಸಿದರು.ಸ್ಫರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಹನೆಯಿಂದ ಚಾಚು ತಪ್ಪದೆ ಮಹತ್ವ ಪೂರ್ಣ ಫಲಿತಾಂಶ ಗಳಿಸಿಕೊಂಡರೆ ಉತ್ತಮವಾಗಿ ರೂಪಿಸಕೊಳ್ಳಬಹುದು ಎಂದು ಸಲಹೆ ನೀಡಿದರು. ಸಂದರ್ಭದಲ್ಲಿ ಉಪ ವ್ಯವಸ್ಥಾಪಕ ಎಚ್.ಪಿ. ಮುನಿರಾಜು, ಡಾ. ಕೆ.ಸಿ. ಶ್ರೀಧರ್, ವಿಸ್ತರಣಾಧಿಕಾರಿ ಎಚ್. ಶ್ರೀಧರ್ ಉಪಸ್ಥಿತರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.