ಬೀದರ್: ಬೀದರ್ ಸೇರಿದಂತೆ ಮೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಗುಲ್ಬರ್ಗ-ಬೀದರ್ ಹಾಲು ಒಕ್ಕೂಟವು ಇದೇ 5 ರಿಂದ ಜಾರಿಗೆ ಬರುವಂತೆ ರೈತರಿಂದ ಹಾಲು ಖರೀದಿಸುವ ದರದಲ್ಲಿ ಲೀಟರ್ಗೆ ರೂ. 1.50 ಕಡಿತ ಮಾಡಿದೆ.

ಸಾಗಣೆಯಲ್ಲಿ ಆಗುತ್ತಿರುವ ನಷ್ಟದ ಹಿನ್ನೆಲೆಯಲ್ಲಿ ಎರಡು ತಿಂಗಳ ಅವಧಿಗೆ ಈ ಕಡಿತ ಮಾಡಲಾಗಿದೆ. ಸದ್ಯ ರೂ. 1.50 ಕಡಿತ ಮಾಡಿದ್ದರೂ, ಬೀದರ್-ಗುಲ್ಬರ್ಗ ಒಕ್ಕೂಟವೇ ಇತರೆ ಒಕ್ಕೂಟಗಳಿಗಂತಲೂ ಹೆಚ್ಚಿನ ದರವನ್ನು ರೈತರಿಗೆ ಪಾವತಿಸುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ಬುಧವಾರ ಸಮರ್ಥಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟದಲ್ಲಿ ಹಾಲು ಮಾರಾಟದ ಪ್ರಮಾಣ ಕಡಿಮೆ ಇದ್ದು, ಹೆಚ್ಚುವರಿಯಾಗಿ ಉಳಿಯುವ ಸುಮಾರು 16 ಸಾವಿರ ಲೀಟರ್ ಹಾಲನ್ನು ಪೌಡರ್ ಸಿದ್ಧಪಡಿಸಲು ಬೆಳಗಾವಿ ಡೆಂಪೋ ಡೇರಿಗೆ ಕಳುಹಿಸಿಕೊಡಲಾಗುತ್ತಿದೆ.ಇದರಿಂದ ಡೇರಿಗೆ ಪ್ರತಿ ಲೀಟರ್ ಹಾಲಿಗೆ 8 ರೂ. 50 ಪೈಸೆ ನಷ್ಟವಾಗುತ್ತಿದೆ ಎಂದು ವಿವರಿಸಿದರು.

ಪ್ರಸ್ತುತ ಒಕ್ಕೂಟವು ಒಟ್ಟಾರೆ ಸುಮಾರು ದೈನಿಕ 80 ಸಾವಿರ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಬೀದರ್ ಜಿಲ್ಲೆಯಲ್ಲಿಯೇ ಸುಮಾರು 52 ಸಾವಿರ ಲೀಟರ್ ಸಂಗ್ರಹವಾಗುತ್ತಿದೆ. ಮಾರುಕಟ್ಟೆಗೆ ಸುಮಾರು 60 ಸಾವಿರ ಲೀಟರ್ ಮಾರಾಟ ಆಗುತ್ತಿದೆ.

ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ವಿಸ್ತರಣೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಬೀದರ್ನಲ್ಲಿ ನಗರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇನ್ನಷ್ಟು ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಿಲಾಗಿದೆ.

ಪ್ರಸ್ತುತ 6 ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ನಗರಸಭೆಗೆ ಎಲ್ಲ ವಾರ್ಡ್ಗಳಲ್ಲಿ ಸ್ಥಳಾವಕಾಶ ಒದಗಿಸಲು ಕೋರಿದ್ದು, ಪ್ರತಿಕ್ರಿಯೆ ಆಧರಿಸಿ ಪ್ರತಿ ವಾರ್ಡ್ನಲ್ಲಿಯೂ ಮಳಿಗೆ ಆರಂಭಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.