ಪಾಕ್ ಭಯೋತ್ಪಾದಕರು ಮುಂಬಯಿನ ತಾಜ್ ಹೋಟೆಲ್ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ವಿಷಯದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ದಾಳಿಯ ರೂವಾರಿ ಹಫೀಜ್ ಸಯೀದ್ನನ್ನು ಭಾರತಕ್ಕೆ ಒಪ್ಪಿಸಬೇಕೆಂದು ಪ್ರಧಾನಿ ಮತ್ತು ಕೇಂದ್ರ ಕೆಲ ಸಚಿವರು ಪಾಕಿಸ್ತಾನವನ್ನು ಒತ್ತಾಯಿಸುವ ಕ್ರಮವೇ ಹಾಸ್ಯಾಸ್ಪದ.

ಈ ದಾಳಿಯಲ್ಲಿ ಸೆರೆ ಸಿಕ್ಕ ಏಕೈಕ ಉಗ್ರ ಕಸಬ್ಗೆ ನೇಣು ಶಿಕ್ಷೆಯಾಗಿದೆ. ಅದನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ.ಹತ್ತು ವರ್ಷಗಳ ಹಿಂದೆ ಸಂಸತ್ ಭವನದ ಮೇಲೆ ದಾಳಿ ಸಂಚುಗಾರ ಅಫ್ಜಲ್ ಗುರುವಿಗೂ ಶಿಕ್ಷೆ ಆಗಿಲ್ಲ.

ಇಡೀ ದೇಶವೇ ಶಿಕ್ಷೆಗೆ ಒತ್ತಾಯಿಸಿದರೂ ಸರ್ಕಾರ ಸುಮ್ಮನಿದೆ. ಹಫೀಜ್ ಸಯೀದ್ನನ್ನು ನಮ್ಮ ದೇಶಕ್ಕೆ ಕರೆತಂದು ವಿಚಾರಣೆ ಮಾಡಿದರೂ ಅವನಿಗೆ ಶಿಕ್ಷೆ ಆದೀತು ಎಂಬ ವಿಶ್ವಾಸ ಯಾರಿಗೂ ಇಲ್ಲ.

ಹೀಗಿರುವಾಗ ಸಯೀದ್ನನ್ನು ನಮ್ಮ ವಶಕ್ಕೆ ಕೊಡಿ ಎಂದು ಕೇಳುವುದು ಹಾಸ್ಯಾಸ್ಪದ ಬೇಡಿಕೆಯಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.