ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯ ದಿಂದ ಹಮ್ಮಿಕೊಂಡಿದ್ದ ರಾಜಾಭಾಷಾ ಪಾಕ್ಷಿಕದ ಸಮಾರೋಪ ಸಮಾರಂಭ ಬುಧವಾರ ನಗರದ ರೈಲ್ವೆ ಅಧಿ ಕಾರಿಗಳ ಕ್ಲಬ್ ಸಭಾಂಗಣದಲ್ಲಿ ನಡೆ ಯಿತು. `ಅಧಿಕಾರಿಗಳ ಸಹಕಾರ ದಿಂದ ಪಾಕ್ಷಿಕ ಅತ್ಯಂತ ಯಶಸ್ವಿಯಾಗಿ ಸಮಾ ರೋಪಗೊಂಡಿದೆ~ ಎಂದು ವಲಯ ಪ್ರಧಾನ ವ್ಯವಸ್ಥಾಪಕ ಕುಲದೀಪ ಚತುರ್ವೇದಿ ಮೆಚ್ಚುಗೆ ವ್ಯಕ್ತಪಡಿ ಸಿದರು.

`ಹಿಂದಿ ಭಾಷಾ ಸ್ಪರ್ಧೆಗಳಲ್ಲಿ ಬಹಳಷ್ಟು ಅಧಿಕಾರಿಗಳು ಪಾಲ್ಗೊಂಡಿದ್ದು ನನಗೆ ಹರ್ಷ ತಂದಿದೆ. ಇದೇ ರೀತಿ ಸಮರ್ಪಣಾ ಭಾವದಿಂದ ಕೆಲಸ ಮಾಡಿದರೆ ರಾಷ್ಟ್ರಮಟ್ಟದಲ್ಲಿ ನಮ್ಮ ವಲಯ ಹಿಂದಿ ಭಾಷಾ ಅನು ಷ್ಠಾನದಲ್ಲಿ ಒಳ್ಳೆಯ ಹೆಸರು ಮಾಡ ಲಿದೆ~ ಎಂದು ಅವರು ಹೇಳಿದರು.

ಮುಖ್ಯ ರಾಜಭಾಷಾ ಅಧಿಕಾರಿ ಆರ್.ಕೆ. ಅಹೆರ್ವಾರ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಹಿಂದಿ ಪಾಕ್ಷಿ ಕದ ಸಂಕ್ಷಿಪ್ತ ವರದಿಯನ್ನು ಡಾ. ಶ್ಯಾಮಸುಂದರ ಸಹು ಮಂಡಿಸಿದರು. ಕೇಂದ್ರ ಸರ್ಕಾರಿ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕ್ಗಳು ಹಾಗೂ ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹು ಮಾನ ವಿತರಿಸಲಾಯಿತು. ದೇವಕಾಂತ ಪವಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.