ಗುರುವಾರ , ಆಗಸ್ಟ್ 5, 2021
26 °C

ಹಿಂದುಳಿದ ವರ್ಗಗಳ ಆಯೋಗಕ್ಕೆ ಅಧ್ಯಕ್ಷರ ನೇಮಕ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದುಳಿದವರ ಮೀಸಲಾತಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಮತ್ತು  ಕೇಂದ್ರ ಸರ್ಕಾರದ ಅದೇಶದಂತೆ ಎಲ್ಲ ರಾಜ್ಯಗಳೂ ಹಿಂದುಳಿದವರ ಆಯೋಗಗಳನ್ನು ರೂಪಿಸಿವೆ.  ಕರ್ನಾಟಕದಲ್ಲಿನ ಹಿಂದುಳಿದವರ ಆಯೋಗಕ್ಕೆ ಈಗ ಅಧ್ಯಕ್ಷರಿಲ್ಲದೆ ಅದು ನಿಷ್ಕ್ರಿಯವಾಗಿದೆ. ಇದು ಈಗಿನ ಸರ್ಕಾರ ಹಿಂದುಳಿದವರ ಬಗ್ಗೆ ಹೊಂದಿದ ಕಳಕಳಿಯನ್ನು ಸೂಚಿಸುತ್ತದೆ.



 ಈ ಆಯೋಗದ ಹಿಂದಿನ ಅಧ್ಯಕ್ಷರ ಅವಧಿ ಮುಗಿದ ಮೇಲೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲು ಸರ್ಕಾರ ಇನ್ನೂ ಮೀನಮೇಷ ಎಣಿಸುತ್ತಿರುವುದು ವಿಪರ್ಯಾಸ.

ಎಲ್ಲವನ್ನೂ ರಾಜಕೀಯ ಚಾಳೀಸಿನಿಂದ ನೋಡುವುದನ್ನು ಬಿಟ್ಟು ಸರ್ಕಾರ ಹಿಂದುಳಿದವರ ಆಯೋಗಕ್ಕೆ ಒಬ್ಬ ಅಧ್ಯಕ್ಷರನ್ನು ನೇಮಕ ಮಾಡುವುದು ಅಗತ್ಯವಾಗಿದೆ.



ನೇಮಕಗೊಳ್ಳುವ ಅಧ್ಯಕ್ಷರು ಯಾವುದೇ ಜಾತಿಗೆ ಸೇರಿರಲಿ,  ಹಿಂದುಳಿದವರ ಬಗ್ಗೆ ಅವರಿಗೆ ಮಾನವೀಯತೆ, ತಳ ಸಮುದಾಯಗಳ ರಾಜಕೀಯ, ಸಾಮಾಜಿಕ, ಆರ್ಥಿಕ ಬದುಕಿನ ಬಗ್ಗೆ ಅಪಾರ ಅನುಭವ ಹೊಂದಿರಬೇಕು. ಇಂತಹ ವ್ಯಕ್ತಿಯನ್ನು ಸರ್ಕಾರ ಕೂಡಲೇ ನೇಮಕ ಮಾಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.