ಸೋಮವಾರ, ಏಪ್ರಿಲ್ 19, 2021
32 °C

ಹಿಂದೂ ಸ್ವಾಮೀಜಿಗೆ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್, (ಪಿಟಿಐ): ಇಬ್ಬರು ಬಾಲಕಿಯರಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಇಲ್ಲಿನ ಹಿಂದೂ ಆಶ್ರಮದ ಹಿರಿಯ ಸ್ವಾಮೀಜಿಗೆ ಶಿಕ್ಷೆಯಾಗಿದೆ.ಆಸ್ಟಿನ್‌ನಲ್ಲಿ 200 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿರುವ ‘ಬರ್ಸನ ಧಾಮ’ ಆಶ್ರಮದಲ್ಲಿ ಈ ಹುಡುಗಿಯರು ಹಾಗೂ ಅವರ ಕುಟುಂಬದ ಸದಸ್ಯರು ಬಹಳ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.ಭಕ್ತರಿಗೆ ಶ್ರೀ ಸ್ವಾಮೀಜಿ ಎಂದೇ ಪರಿಚಿತನಾದ ಪ್ರಕಾಶಾನಂದ ಸರಸ್ವತಿ ಈ ಬಾಲಕಿಯರು ಬೆಳೆದಂತೆ 1990ರ ಮಧ್ಯಭಾಗದಿಂದಲೇ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂಬ ಆರೋಪವಿತ್ತು.ಈ ಆಶ್ರಮ ದೇಶದಾದ್ಯಂತ ಇರುವ ಬಹುಸಂಖ್ಯೆಯ ಅಮೆರಿಕದ ಹಿಂದೂ ಭಕ್ತರನ್ನು ಆಕರ್ಷಿಸುತ್ತಿದೆ. ಈ ಧಾರ್ಮಿಕ ಮುಖಂಡನಿಗೆ ಶಿಕ್ಷೆಯಾಗಿರುವುದು ಹಿಂದೂ ಭಕ್ತರಿಗೆ ದಿಗ್ಭ್ರಮೆಯನ್ನುಂಟು ಮಾಡಿದೆ.ನ್ಯಾಯಾಲಯ ಶಿಕ್ಷೆ ವಿಧಿಸಿದೆಯಾದರೂ ತೀರ್ಪು ಪ್ರಕಟಿಸಿಲ್ಲ. ಸ್ವಾಮೀಜಿ ವಿರುದ್ಧದ 20 ಆರೋಪಗಳಿಗೆ ಗರಿಷ್ಠ 20 ವರ್ಷಗಳ ಶಿಕ್ಷೆ ವಿಧಿಸಬಹುದಾಗಿದೆ. ತಾವು 12 ವರ್ಷದವರಿದ್ದಾಗಲೇ ಪ್ರಕಾಶಾನಂದ ಸ್ವಾಮೀಜಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಆರಂಭಿಸಿದ್ದ ಎಂದು ಈಗ 27 ಹಾಗೂ 30 ವಯಸ್ಸಿನ ಅವರಿಬ್ಬರು ಆರೋಪಿಸಿದ್ದಾರೆ.2008 ಏಪ್ರಿಲ್‌ನಲ್ಲಿ ಈ ಮಹಿಳೆಯರ ಆರೋಪದ ಮೇಲೆ ಪ್ರಕಾಶಾನಂದ ಸರಸ್ವತಿಯನ್ನು ಬಂಧಿಸಲಾಗಿತ್ತು.ಬಳಿಕ  10 ಲಕ್ಷ ಅಮೆರಿಕನ್ ಡಾಲರ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.