ಗುರುವಾರ , ಮೇ 13, 2021
16 °C

ಹಿತ್ತಾಳೆ ಪಾತ್ರೆ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆಯನ್ನು ಸುಂದರವಾಗಿ ಇಡುವುದು ಯಾರಿಗೆ ತಾನೆ ಇಷ್ಟವಿರುವುದಿಲ್ಲ. ಮನೆಗೆ ಬಂದ ಅತಿಥಿಗಳು, ಸ್ನೇಹಿತರು ನಿಮ್ಮ ಮನೆ ತುಂಬ ಚೆನ್ನಾಗಿದೆ, ಮನೆಯನ್ನು ಎಷ್ಟು ಚೊಕ್ಕವಾಗಿ ಇರಿಸಿರುವಿರಿ ಎಂಬ ಹೊಗಳಿಕೆಯ ಮಾತುಗಳು  ಪ್ರಿಯವಾಗುತ್ತವೆ.ಇಂತಹ ಹೊಗಳಿಗೆ ಪಡೆಯಲು ಕೆಲವರು ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಮಾರುಕಟ್ಟೆಯಲ್ಲಿ  ಸಿಗುವ ಹೊಸ ಬಗೆಯ ಹೂದಾನಿಗಳನ್ನು, ದೀಪಗಳನ್ನು ಖರೀದಿಸಿ ತರುತ್ತೇವೆ. ಇದಕ್ಕೆಲ್ಲ   ತುಂಬ ಹಣವನ್ನು ಸುರಿಯುತ್ತೇವೆ. ಹೀಗಿರುವಾಗ ನೀವು ಮನೆಯಲ್ಲಿಯೇ ಸಿಗುವ ಹಳೆಯ ಪಾತ್ರೆಗಳನ್ನು ಬಳಸಿ ನಿಮ್ಮ ಮನೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಬಹುದು.ಮುಂದಿನ ಸಲ ನಿಮ್ಮ ಅಜ್ಜಿಯ ಮನೆಗೋ, ಅಮ್ಮನ ಮನೆಗೋ ಹೋದಾಗ ಅಲ್ಲಿನ ಅಟ್ಟದ ಮೇಲೆ ಹತ್ತಿ ಹುಡುಕಿ ನೋಡಿ. ಖಂಡಿತವಾಗಿಯೂ ನಿಮಗೆ ಕಪ್ಪಾಗಿ ಹೋದ, ದೂಳು ತುಂಬಿದ ಹಿತ್ತಾಳೆ ಪಾತ್ರೆಗಳು ಸಿಗುತ್ತವೆ.ಹಿಂದಿನ ಕಾಲದಲ್ಲಿ ಊಟ ಮಾಡುವುದರಿಂದ ಹಿಡಿದು ಅಡಿಗೆ ಮಾಡುವವರೆಗೂ ಹಿತ್ತಾಳೆ ಪಾತ್ರೆಗಳನ್ನು ಬಳಸಲಾಗುತ್ತಿತ್ತು. ಕಾಲ ಬದಲಾದಂತೆ ಹಿತ್ತಾಳೆಯ ಬದಲಿಗೆ ಸ್ಟೀಲ್, ಪಾಸ್ಲ್ಟಿಕ್, ಸೆರಾಮಿಕ್ಸ್ ಮುಂತಾದವು ಬಳಕೆಗೆ ಬಂದವು. ಆದರೆ, ಅಂದಿನ ಕಾಲದ ಹಿತ್ತಾಳೆ ಪಾತ್ರೆಗಳ ಬಳಕೆ ಈಗ ಮತ್ತೆ  ಫ್ಯಾಷನ್ ಆಗಿದೆ. ಹಿತ್ತಾಳೆಯಿಂದ ಮಾಡಿದ  ತಟ್ಟೆ, ಲೋಟ, ಅಡುಗೆ ಮಾಡುವ ಪಾತ್ರೆಗಳು,   ಹೂವಿನ ಕುಂಡ, ವಾಸ್, ಲ್ಯಾಂಪ್, ಟೇಬಲ್ ಗಡಿಯಾರ, ದೀಪ, ಕೊಡ, ಶೋಪೀಸ್‌ಗಳು, ವಿಗ್ರಹಗಳು, ಕಲಾ ವಸ್ತುಗಳು ಲಭ್ಯ ಇವೆ.ಹಿತ್ತಾಳೆ ಲೋಟಗಳನ್ನು ಹೂದಾನಿಗಳನ್ನಾಗಿ ಮಾಡಬಹುದು ಅಥವಾ ಪೆನ್ ಸ್ಟ್ಯಾಂಡ್ ಮಾಡಬಹುದು, ಮಡಿಕೆಗಳನ್ನು ಒಂದು ಮೂಲೆಯಲ್ಲಿ ಒಂದರ ಮೇಲೆ ಒಂದನ್ನು ಜೋಡಿಸಿ ಅದನ್ನು ಸ್ಟೋರೇಜ್‌ಗೆ ಉಪಯೋಗಿಸಬಹುದು. ಇವುಗಳು ನೋಡಲೂ ಸುಂದರವಾಗಿರುತ್ತವೆ.ಕೆಲವು ಉದ್ದದ ಪಾತ್ರೆಗಳಲ್ಲಿ ಮನೆಯೊಳಗೆ ಗಿಡಗಳನ್ನೂ ಬೆಳೆಯಬಹುದು. ದೊಡ್ಡ ದೀಪಗಳನ್ನು ದೇವರ ಕೋಣೆಯ ಹೊರಗೆ ಇಟ್ಟರೆ ನೋಡಲು ಚಂದ. ಚಿಕ್ಕ ವಿಗ್ರಹಗಳನ್ನು ಟೇಬಲ್ ಮೇಲೆ ಇಡಬಹುದು.  ಅಗಲ ಪಾತ್ರೆಗಳಲ್ಲಿ ನೀರು ತುಂಬಿ ಬಣ್ಣ ಬಣ್ಣದ ಹೂವುಗಳನ್ನು ತೇಲಿ ಬಿಡಿ. ನೋಡಲು ತುಂಬ ಸುಂದರವಾಗಿರುತ್ತದೆ.ನಿಮ್ಮ ಬಳಿ ಹಳೆಯ ಹಿತ್ತಾಳೆ ಪಾತ್ರೆಗಳಿರದಿದ್ದರೆ ಚಿಂತೆಯಿಲ್ಲ. ಮಾರುಕಟ್ಟೆಯಲ್ಲಿ  ವಿವಿಧ ಬಗೆಯ ಪಾತ್ರೆಗಳು ದೊರೆಯುತ್ತವೆ.  ಕಪ್ಪಗಾದ ಹಳೆಯ ಹಿತ್ತಾಳೆ ಪಾತ್ರೆಗಳನ್ನು ಪಾಲಿಶ್ ಮಾಡಿಸಿದರೆ ಫಳ ಫಳ ಹೊಳೆಯುತ್ತವೆ.ನೀರು, ಹುಣಸೆ, ವಿನೆಗರ್, ಲಿಂಬೆ ರಸ ಬಳಸಿ ಚೆನ್ನಾಗಿ ಉಜ್ಜಿ ತೊಳೆಯಿರಿ. ಇವುಗಳನ್ನು ಮನೆಗಳಲ್ಲಿ ಮಾತ್ರವಲ್ಲದೇ ಹೋಟೆಲ್, ಆಫೀಸ್, ಮಾಲ್, ದೇವಸ್ತಾನ, ಹಾಗು ಮದುವೆ ಮಂಟಪಗಳಲ್ಲಿಯೂ ಉಪಯೋಗಿಸಬಹುದು. 

                                    

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.