ಗುರುವಾರ , ಮೇ 19, 2022
20 °C

ಹಿರಿಯರಿಗೆ ಅನುಕಂಪಕ್ಕಿಂತ ಅಗತ್ಯ ನೆರವು ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಬದಲಾದ ಸಾಮಾಜಿಕ ಸಂದರ್ಭದಲ್ಲಿ ಹಿರಿಯ ನಾಗರೀಕರು ಅನೇಕ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ಅನುಕಂಪಕ್ಕಿಂತಲೂ ಅಗತ್ಯ ನೆರವು ಒದಗಿಸುವ ಅವಶ್ಯಕತೆಯಿದೆ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ದೇವೆಂದ್ರ ಕಮಲ್ ಅಭಿಪ್ರಾಯಪಟ್ಟರು.ಅಂತರರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ತ ನಗರದ ಕರ್ನಾಟಕ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿ, ಹಿರಿಯ ನಾಗರಿಕರಿಗೆ ಗೌರವ ಪ್ರೀತಿ ನೀಡುವಂತಹ ಸಂಸ್ಕೃತಿ ನಮ್ಮ ದೇಶದ್ದಾಗಿದೆ. ಆದ್ದರಿಂದ ಪ್ರತಿಯೊಬ್ಬರು ಹಿರಿಯರನ್ನು ಗೌರವಿಸಬೇಕು ಎಂದು ಸಲಹೆ ಮಾಡಿದರು.  ಹಿರಿಯರು ಕಾಲಕ್ಕೆ ಅನುಗುಣವಾಗಿ ಬದಲಾದರೆ ಮಾತ್ರ ಇಂದಿನ ಯುವಪೀಳಿಗೆಯವರೂ ಗೌರವಿಸುತ್ತಾರೆ.ಆಧುನಿಕತೆಗೆ ಅನುಗುಣವಾಗಿ ಹಿರಿಯರು ಬದಲಾಗಬೇಕು ಎಂದು ಹೇಳಿದರು. ಜೀವನದ ಪ್ರತಿಯೊಂದು ಹಂತದಲ್ಲೂ ಹಿರಿಯರ ಮಾರ್ಗದರ್ಶನದ ಅಗತ್ಯವಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ ನುಡಿದರು. ಸಂಸ್ಥೆ ಯ ಖಜಾಂಚಿ ಬಿ,ಜಿ, ಪಾಟೀಲ್ ಮಾತನಾಡಿದರು.ಕಾರ್ಯದರ್ಶಿ ಬಾಬುರಾವ ಪಾಟೀಲ್, ಪ್ರಮುಖರಾದ ಸಿರಗಾಪುರ, ಪ್ರೊ. ವಿಜಯಕುಮಾರ ಗಂಗು, ಪ್ರೊ. ಎಸ್.ಎನ್. ಗೌಡಪನೊರ್, ಪ್ರೊ. ಎಸ್.ವಿ. ಜೂಜಾ, ಪ್ರೊ. ವೈಜಿನಾಥ ಚಿಕ್‌ಬಸ್ಸೆ, ಪ್ರೊ. ಸಚಿನಕುಮಾರ ಇದ್ದರು.  ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರವಿರಾಜ ನಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಪ್ರೊ. ವಿ, ಧನಪಾಲ್ ಸ್ವಾಗತಿಸಿದರು. ಪ್ರೊ. ಬಸವರಾಜ ಪೂಜಾರ್ ವಂದಿಸಿದರು.ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಯೋಗೇಶ್ವರ (ಪ್ರಥಮ), ರಾಹುಲ್ ಗಾದಾ (ದ್ವಿತೀಯ), ಪ್ರಶಾಂತ (ತೃತೀಯ) ಬಹುಮಾನ ಪಡೆದರೆ. ಇಂಗ್ಲಿಷ ಮಾಧ್ಯಮದಲ್ಲಿ ಪೂಜಾಶ್ರೀ (ಪ್ರಥಮ), ಜಗದೀಶ್ವರ (ದ್ವಿತೀಯ), ವಿಜಯಕುಮಾರ (ತೃತೀಯ) ಬಹುಮಾನ ತಮ್ಮದಾಗಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.