ಶನಿವಾರ, ಮೇ 21, 2022
25 °C

ಹಿರಿಯ ಐಪಿಎಸ್ ಅಧಿಕಾರಿ ವಿರುದ್ಧ ಕ್ರಮ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ  (ಪಿಟಿಐ): ತೆರಿಗೆ ವಂಚನೆ ಆರೋಪಿ ಪುಣೆ ಮೂಲದ ಉದ್ಯಮಿ ಹಸನ್ ಅಲಿ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ವಿರುದ್ಧ ಮಹಾರಾಷ್ಟ್ರ ಸರ್ಕಾರ  ಕ್ರಮ ಜರುಗಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಪೊಲೀಸ್ ಅಧಿಕಾರಿ ರೈಲ್ವೆ ವಿಭಾಗದ ಉಪ ಆಯುಕ್ತ ಅಶೋಕ್ ದೇಶಭ್ರತಾರ್. 2008ರಲ್ಲಿ ನಕಲಿ ಪಾಸ್ ಪೋರ್ಟ್‌ಗೆ ಸಂಬಂಧಿ ಸಿದಂತೆ ಹಸನ್ ಅಲಿಯನ್ನು ಮುಂಬೈ ನಲ್ಲಿ ಬಂಧಿಸಲಾಗಿತ್ತು.ಆಗ ಈತನನ್ನು ವಿಚಾರಣೆ ನಡೆಸಿದ್ದ ಪೊಲೀಸ್ ಅಧಿಕಾರಿ ಅಶೋಕ್ ದೇಶಭ್ರತಾರ್ ಅವರು ಇಡೀ ವಿಚಾರಣೆಯನ್ನು ಗುಪ್ತವಾಗಿ ಚಿತ್ರೀಕರಿಸಿ ಕೊಂಡಿದ್ದ ವಿಡಿಯೋ ಟೇಪ್ ಗಳನ್ನು ಸಂಕಲನ ಮಾಡಿ ಸಿಡಿಗಳ ಮುಖಾಂತರ ಬಹಿರಂಗಗೊಳಿಸಿದ್ದರು ಎಂದು ಸಿಐಡಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಅಂದಿನ ವಿಚಾರಣೆ ಸಂದರ್ಭ ಹಸನ್ ಅಲಿ ಎನ್‌ಸಿಪಿಯ ನಾಯಕರು ಮತ್ತು ರಾಜ್ಯ  ಗೃಹ ಮಂತ್ರಿ ಆರ್.ಆರ್. ಪಾಟೀಲ್‌ಗೆ  ತಾನು ನಿಕಟವರ್ತಿ ಎಂದು ಹೇಳಿದ್ದು ಈ ಸಿಡಿಗಳಲ್ಲಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.