ಶುಕ್ರವಾರ, ಮೇ 7, 2021
19 °C

ಹಿರೆಕೊಳಲೆಯಲ್ಲಿ 27 ಎಕರೆ ಕಾಫಿ ತೋಟ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ತಾಲ್ಲೂಕಿನಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾ ಚರಣೆ ಅಧಿಕೃತವಾಗಿ ಆರಂಭವಾಗಿದ್ದು, ಒತ್ತುವರಿದಾರರಲ್ಲಿ ನಡುಕ ಉಂಟಾಗಿದೆ. ನಗರ ಸಮೀಪದ ಇಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೆಕೊಳಲೆ ಗ್ರಾಮದಲ್ಲಿ ಅರಣ್ಯ ಒತ್ತುವರಿ ಮಾಡಿ ಬೆಳೆದಿದ್ದ ಸುಮಾರು 27 ಎಕರೆ 26 ಗುಂಟೆ ಕಾಫಿ ತೋಟವನ್ನು ಅರಣ್ಯ ಇಲಾಖೆ ಶುಕ್ರವಾರ ತೆರವುಗೊಳಿಸಿತು. ಫಸಲಿಗೆ ಬಂದಿದ್ದ ಸಾವಿರಾರು ಕಾಫಿ ಗಿಡಗಳು ಅರಣ್ಯ ಇಲಾಖೆಯ ಕುಡುಗೋಲು, ಮಚ್ಚು, ಗರಗಸಗಳಿಗೆ ಬಲಿಯಾದವು.ಗ್ರಾಮದ ಕೆ.ಸಿ.ನಾರಾಯಣಗೌಡ ಎಂಬುವವರು ಒತ್ತುವರಿ ಮಾಡಿ ಬೆಳೆದಿದ್ದ 20 ಎಕರೆ, 38 ಗುಂಟೆ ಕಾಫಿ ತೋಟವನ್ನು ಖುಲ್ಲಾಪಡಿಸಿ, ಅರಣ್ಯ ಇಲಾಖೆ ವಶಕ್ಕೆ ಪಡೆಯಲಾಯಿತು. ಇದೇ ಗ್ರಾಮದಲ್ಲಿ ಶಕೀಲಾ ಎಂಬುವವರು ಒತ್ತುವರಿ ಮಾಡಿದ್ದ 6 ಎಕರೆ, 36 ಗುಂಟೆ ಜಾಗದಲ್ಲಿ ಕಾಫಿ, ಮೆಣಸು ಕಡಿದು ಹಾಕಿ ಜಾಗವನ್ನು ವಶಕ್ಕೆ ತೆಗೆದುಕೊಂಡರು.1997ರಲ್ಲಿ ಈ ಇಬ್ಬರ ವಿರುದ್ಧ ಅರಣ್ಯ ಭೂಮಿ ಒತ್ತುವರಿ ಪ್ರಕರಣ ದಾಖಲಾಗಿತ್ತು. 1999ರಲ್ಲಿ ಒತ್ತುವರಿ ತೆರವುಗೊಳಿಸುವಂತೆ ಸ್ಥಳೀಯ ನ್ಯಾಯಾಲಯ ಆದೇಶ ನೀಡಿತ್ತು. 2000ರಲ್ಲೇ ಹೈಕೋರ್ಟ್ ಕೂಡ ಒತ್ತುವರಿ ಖುಲ್ಲಾಪಡಿಸುವಂತೆ ಆದೇಶ ನೀಡಿತ್ತು. ಈಗ ನ್ಯಾಯಾಲಯದ ಆದೇಶದ ಅನ್ವಯ ಅರಣ್ಯ ಅಧಿಕಾರಿ ಗಳು ಒತ್ತುವರಿ ತೆರವುಗೊ ಳಿಸುವಂತೆ ಸಂಬಂಧಿಸಿದವರಿಗೆ ನೋಟಿಸ್ ಜಾರಿಗೊ ಳಿಸಿದ್ದರು. ಜಿಲ್ಲಾ ಉಪ ಅರಣ್ಯ ಸಂರಕ್ಷ ಣಾಧಿಕಾರಿ ರವಿರಾಜ್ ನಾರಾಯಣ್ ನೇತೃತ್ವದಲ್ಲಿ ಇಲಾಖೆಯ 200ಕ್ಕೂ ಹೆಚ್ಚು ಸಿಬ್ಬಂದಿ ಪೊಲೀಸ್ ರಕ್ಷಣೆಯಲ್ಲಿ ಒತ್ತುವರಿ ತೆರವುಗೊಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.