ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಪೋಷಕರು ಚನ್ನಗಿರಿ ತಾಲ್ಲೂಕಿನ ಕಂಚುಗಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯನ್ನು ಒಮ್ಮೆ ನೋಡಬೇಕು. ಪಾಠ ಪ್ರವಚನ, ಕ್ರೀಡೆ, ವಿಜ್ಞಾನ, ಸಾಂಸ್ಕೃತಿಕ ಚಟುವಟಿಕೆ, ಮಕ್ಕಳ ನಿತ್ಯದ ಹಾಜರಿಯಲ್ಲಿ ಉನ್ನತ ಶಿಸ್ತನ್ನು ಕಾಯ್ದುಕೊಂಡಿರುವ ಈ ಶಾಲೆ ಕಳೆದ ಏಪ್ರಿಲ್ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದು ಅಚ್ಚರಿ ಮೂಡಿಸಿದೆ.

ಗ್ರಾಮಸ್ಥರ ಒತ್ತಾಯದ ಫಲವಾಗಿ 2005ರಲ್ಲಿ ಈ ಪ್ರೌಢಶಾಲೆ ಮಂಜೂರಾಯಿತು. ವಿಶಾಲ ಆಟದ ಮೈದಾನ, ಬೋಧನಾ ಕೊಠಡಿಗಳು, ವಿಜ್ಞಾನ ಮಂದಿರ, ಗ್ರಂಥಾಲಯ ಅಲ್ಲದೇ ಶಿಕ್ಷಣದಲ್ಲಿ ಆಧುನಿಕತೆ ತರಲು ಮಕ್ಕಳಿಗೆ ಇಲ್ಲಿ ಕಂಪ್ಯೂಟರ್ ಮೂಲಕ ಶಿಕ್ಷಣ ನೀಡುವ ವ್ಯವಸ್ಥೆ ಇದೆ. ಇಂಗ್ಲಿಷ್, ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ ಪಾಠಗಳನ್ನು ಸಿಡಿಗಳನ್ನು ಬಳಸಿ ಕಂಪ್ಯೂಟರ್ ಮೂಲಕ ನೀಡುತ್ತಿರುವುದು ಶಾಲೆಯ ವಿಶೇಷ.

ಮುಂಜಾನೆ ಮತ್ತು ಸಂಜೆ ವಿಶೇಷ ತರಗತಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಬೇತಿ, ಘಟಕ ಪರೀಕ್ಷೆ, ಪ್ರತಿ ತಿಂಗಳು ವಿಷಯವಾರು ಲಘು ಪರೀಕ್ಷೆಗಳು, ಶಿಕ್ಷಕರಿಂದ ಮಕ್ಕಳ ದತ್ತು ಪಡೆಯುವಿಕೆ, 100 ರಷ್ಟು ಹಾಜರಾತಿಗೆ ಕ್ರಮ ಇವುಗಳಿಂದ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಪಿ.ವಿ. ಮಂಜುನಾಥ.

ಶಾಲೆ ಮಂಜೂರು ಮಾಡಿಸಿಕೊಳ್ಳುವುದಕ್ಕಿಂತ ಅದನ್ನು ಮಕ್ಕಳ ಸಂಪನ್ಮೂಲವನ್ನಾಗಿ ಮಾಡುವುದರಲ್ಲಿ ನಮ್ಮ ಗ್ರಾಮಸ್ಥರ ಪರಿಶ್ರಮ ಹೆಚ್ಚಾಗಿದೆ ಎನ್ನುತ್ತಾರೆ ಶಾಲೆಯ ಅಭಿವೃದ್ಧಿ ಸಮಿತಿಯ ಮೊದಲ ಅಧ್ಯಕ್ಷ ರುದ್ರನಗೌಡ.

ನಮ್ಮಗ್ರಾಮಕ್ಕೆ ಬಸ್ಸೌಲಭ್ಯ ಇಲ್ಲದಿದ್ದರೂ ಶಿಕ್ಷಕರು ಪ್ರತಿದಿನ ತಪ್ಪದೇ ಶಾಲೆಗೆ ಬಂದು ಬೋಧನೆಗೆ ಯಾವ ಕೊರತೆ ಇಲ್ಲದಂತೆ ಮಾಡಿದ್ದಾರೆ ಎನ್ನುತ್ತಾರೆ ಈಗಿನ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಲ್. ನಾಗರಾಜಪ್ಪ, ಶಾಲೆಯ ಅಭಿವೃದ್ಧಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ನಮ್ಮ ಗ್ರಾಮದ ಕೆ.ಆರ್.ಚಂದ್ರಶೇಖರಪ್ಪ,ಸೊಂಡೂರು ಬಸವರಾಜ, ಫಕ್ಕೆರಪ್ಪ, ಪ್ರಭಾಕರ್ ಅವರ ಕೊಡುಗೆ ಅಪಾರವಾಗಿದೆ ಎನ್ನುತ್ತಾರೆ ಇಲ್ಲಿನ ಪಟೇಲ್ ಚಂದ್ರಶೇಖರಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.