ಬಾಲಿವುಡ್ನ ಮುಂಚೂಣಿಯಲ್ಲಿರುವ ನಟರು ಸ್ತ್ರೀ ಕೇಂದ್ರಿತ ಕತೆಗಳಲ್ಲಿ ನಟಿಸಲು ಹಿಂದೇಟು ಹಾಕುತ್ತಿದ್ದಾರೆ, ಇದೊಂಥರ ವಿಚಿತ್ರ ಬೆಳವಣಿಗೆ ಎಂದು ಅನಿಲ್ ಕಪೂರ್ ಅಭಿಪ್ರಾಯ ಪಟ್ಟಿದ್ದಾರೆ.

52 ವರ್ಷದ ಅನಿಲ್ ಕಪೂರ್ `ಜುದಾಯಿ~ `ಲಜ್ಜಾ~, `ಬೇಟಾ~, `ಬಿವಿ ನಂ.1~, `ಬೇಟಾ~ `ಹಮ್ ಆಪ್ಕೆ ದಿಲ್ ಮೆ ರೆಹತೆ ಹೈ~ ಮುಂತಾದ ಸ್ತ್ರೀ ಕೇಂದ್ರಿತ ಚಿತ್ರಗಳಲ್ಲಿ ನಟಿಸಿರುವ ಬಗ್ಗೆ ತಮಗೆ ಹೆಮ್ಮೆ ಇದೆ ಎಂದೂ ಹೇಳಿಕೊಂಡಿದ್ದಾರೆ.

ಇಂಥ ಚಿತ್ರಗಳಲ್ಲಿ ಮಹಿಳಾ ಪಾತ್ರಗಳೇ ಮುಖ್ಯವಾಗಿದ್ದರೂ ನಟರ ಪಾತ್ರಗಳೇನು ಅಮುಖ್ಯವಾಗಿರುವುದಿಲ್ಲ. ಆದರೂ ಅದೇಕೊ ಅಂಥದ್ದೊಂದು ಟ್ರೆಂಡ್ ಬೆಳೆದುಬಂದಿದೆ. ಮೊದಲ ಸಾಲಿನಲ್ಲಿರುವ ಯಾವ ತಾರೆಗಳೂ ಸ್ತ್ರೀ ಕೇಂದ್ರಿತ ಚಿತ್ರಗಳಲ್ಲಿ ನಟಿಸಲು ಮುಂದಾಗುತ್ತಿಲ್ಲ ಎಂದೂ ಅವರು ವಿಷಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.