ಶನಿವಾರ, ಏಪ್ರಿಲ್ 17, 2021
28 °C

ಹುಣಸೂರು:ಗ್ರಾ.ಪಂ.ಅಧ್ಯಕ್ಷ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು : ತಾಲೂಕಿನ ಕೊತ್ತೇಗಾಲ ಗ್ರಾ.ಪಂ ಅಧ್ಯಕ್ಷ ಜಯರಾಮೇಗೌಡ ಪರಿಶಿಷ್ಟ ಜಾತಿಯ ಪಂಚಾಯಿತಿ ಸದಸ್ಯನಿಗೆ ಜೀವ ಬೆದರಿಕೆವೊಡ್ಡಿರುವುದನ್ನು ಆದಿವಾಸಿ ಗಿರಿಜನ ಅಭಿವೃದ್ಧಿ ಸಂಘದ ಸದಸ್ಯರು ಮತ್ತು ಸ್ತ್ರಿ ಶಕ್ತಿ ಮಹಿಳಾ ಸಂಘಟನೆಗಳ ಸದಸ್ಯರು ವಿರೋಧಿಸಿ ಗುರುವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಆದಿವಾಸಿ ಗಿರಿಜನ ಅಭಿವೃದ್ಧಿ ಸಂಘದ ಅಧ್ಯಕ್ಷ ವೆಂಕಟೇಶ್, ಪಂಚಾಯಿತಿ ಸಭೆಯಲ್ಲಿ ಸದಸ್ಯ ಚಂದ್ರಶೇಖರ್ ಗ್ರಾ.ಪಂ. ಸಭೆಯಲ್ಲಿ ಅಧ್ಯಕ್ಷರನ್ನು ಗಿರಿಜನಾಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಸವಲತ್ತುಗಳನ್ನು ಸಮರ್ಪಕವಾಗಿ ಸಮಾಜದವರಿಗೆ ವಿತರಿಸದ ಬಗ್ಗೆ ಪ್ರಶ್ನಿಸಿದರು. ಈ ಸಂಬಂಧ ಪಂಚಾಯಿತಿ ಅಧ್ಯಕ್ಷ ಜಯರಾಮೇಗೌಡ, ಸಭೆಯಲ್ಲಿ  ಸದಸ್ಯರಿಗೆ ಅವಾಚ್ಯ ಪದ ಬಳಸಿ ಜಾತಿ ನಿಂದನೆ ಮತ್ತು ಜೀವಬೆದರಿಕೆ ಹಾಕಿದ್ದಾರೆ ಎಂದರು .ಈ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಗ್ರಾ.ಪಂ ಸದಸ್ಯ ಚಂದ್ರಶೇಖರ್ ದೂರು ಸಲ್ಲಿಸಿದ್ದರೂ ಪೊಲೀಸ್ ಈ ವರಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.ಸಂವಿಧಾನ ಬದ್ದವಾಗಿ ಗಿರಿಜನರಿಗೆ ಸರ್ಕಾರ ನೀಡುವ ಸವಲತ್ತುಗಳನ್ನು ಸಮರ್ಪಕವಾಗಿ ವಿತರಿಸದ ಬಗ್ಗೆ ಜನಪ್ರತಿನಿಧಿ ಸಭೆಯಲ್ಲಿ ವಿಚಾರ ಪ್ರಸ್ಥಾಪಿಸುವುದೇ ತಪ್ಪು ಎನ್ನುವ ಕೊತ್ತೆಗಾಲ ಪಂಚಾಯಿತಿ ಅಧ್ಯಕ್ಷ ಜಯರಾಮೇಗೌಡರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಆದಿವಾಸಿ ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಎಂ.ಮಂಜುನಾಥ್,ಕೃಷ್ಣಯ್ಯ, ರಾಜು.ಎಸ್.ಶಶಿಕುಮಾರ್, ಲೋಕೇಶ್, ಶೇಖರ್, ಚಂದ್ರು, ಆದಿವಾಸಿ ಸ್ವಸಹಾಯ ಸಂಘದ ಅಧ್ಯಕ್ಷೆ ನಾಗಮ್ಮ, ಮಂಜುಳ, ಅಣ್ಣಮ್ಮ, ಮಹದೇವಮ್ಮ, ಭಾಗ್ಯಮ್ಮ ಮತ್ತು ಇತರರು ಭಾಗವಹಿಸಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.