ಮಂಗಳವಾರ, ಜೂನ್ 15, 2021
21 °C
23ರಂದು ಬೈಕ್‌ ರ್‍್ಯಾಲಿ

ಹುತಾತ್ಮರ ಸ್ಮಾರಕಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಭಗತ್‌ಸಿಂಗ್, ರಾಜ್‌­ಗುರು ಮತ್ತು ಸುಖದೇವ್ ಅವರನ್ನು ಗಲ್ಲಿಗೆ ಏರಿಸಿದ ಸ್ಮರಣಾರ್ಥ ‘ಶಹೀದ್ ದಿವಸ್’ ಆಚರಣೆ ಅಂಗವಾಗಿ ಮಾ.23 ರಂದು ನಗರದಲ್ಲಿ ಬೈಕ್ ರ್‌್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದು ಯೂತ್ ಫಾರ್ ಇಂಡಿಯಾ ಕಾರ್ಯದರ್ಶಿ ಎಸ್.ಸುನಿಲ್ ಕುಮಾರ್ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮ­ರಾದವ­ರನ್ನು ಎಲ್ಲಾ ಸರ್ಕಾರಗಳೂ ಮರೆತಿವೆ. ಹೊಸ  ತಲೆಮಾರಿನ ಯುವಕರಲ್ಲಿ ಸ್ವಾತಂತ್ರ್ಯ ವೀರರ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶ. ರಾಜ್ಯ ಸರ್ಕಾರ ನಗರದಲ್ಲಿ ಹುತಾತ್ಮರ ಸ್ಮಾರಕವನ್ನು ನಿರ್ಮಿಸಬೇಕು’ ಎಂದರು. ಬೈಕ್‌ ರ್‌್ಯಾಲಿಯಲ್ಲಿ ಭಾಗ­ವಹಿಸಲು ಇಚ್ಛಿಸುವವರು ಹೆಸರನ್ನು ನೋಂದಾ­ಯಿಸಿ­ಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 89706 64444 ಸಂರ್ಪಕಿಸಬಹುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.