ಬುಧವಾರ, ಏಪ್ರಿಲ್ 21, 2021
31 °C

ಹುಮನಾಬಾದ್: ಚರಂಡಿ ನಿರ್ಮಾಣಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಇಲ್ಲಿನ ವಾರ್ಡ್ ಸಂಖ್ಯೆ 21ಮತ್ತು 23ರ ಕೆಲ ಭಾಗಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಿಸದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.  ಶೀಘ್ರ ಸೌಕರ್ಯ ಕಲ್ಪಿಸುವಂತೆ ವಾರ್ಡ್ ನಿವಾಸಿಗಳು ಪುರಸಭೆ ಅಧಿಕಾರಿಗೆ ಒತ್ತಾಯಿಸಿದ್ದಾರೆ.ಬಸವೇಶ್ವರ ಬಡಾವಣೆಗೆ ಹೊಂದಿಕೊಂಡ ಗುಜರಾತಿ ಅಡ್ಡಾ ಸುತ್ತಮುತ್ತಲ ಪ್ರದೇಶ, ಎ.ಪಿ.ಎಂ. ಎದುರಿಗೆ ಇರುವ ಬಡಾವಣೆ, ನಿರ್ಣಾ ಓಣಿ, ಪಾಟೀಲ ಓಣಿ, ಗಾದಾ ದಾಲಮಿಲ್ ಈ ಬಡಾವಣೆಗಳಲ್ಲಿ ಜನರ ಸಂಚಾರಕ್ಕೆ ಸಮಸ್ಯೆಯುಂಟಾಗಿದೆ.ಅದರಲ್ಲೂ ವಿಶೇಷವಾಗಿ ಮಳೆಗಾಲ ಅವಧಿಯಲ್ಲಿ ರಸ್ತೆಮಧ್ಯೆ ನೀರು ನಿಂತು ಪಾದಚಾರಿ ಮತ್ತು ದ್ವಿಚಕ್ರವಾಹನ ಸಂಚರಿಸುವುದಕ್ಕೆ ತೀವ್ರ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿ ಶೀಘ್ರ ಕೈಗೊಳ್ಳುವಂತೆ ವಾರ್ಡ್ ನಿವಾಸಿಗಳು ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.