ಹುಯಿಲಗೋಳ ನಾರಾಯಣರಾವ್ ಪುತ್ಥಳಿ ಅನಾವರಣ ;ಕವಿಗಳ ಇತಿಹಾಸ ತಿಳಿಯಿರಿ

7

ಹುಯಿಲಗೋಳ ನಾರಾಯಣರಾವ್ ಪುತ್ಥಳಿ ಅನಾವರಣ ;ಕವಿಗಳ ಇತಿಹಾಸ ತಿಳಿಯಿರಿ

Published:
Updated:
ಹುಯಿಲಗೋಳ ನಾರಾಯಣರಾವ್ ಪುತ್ಥಳಿ ಅನಾವರಣ ;ಕವಿಗಳ ಇತಿಹಾಸ ತಿಳಿಯಿರಿ

ಗದಗ: ಹುಯಿಲಗೋಳ ನಾರಾಯಣ ರಾವ್ ಅವರ ಉದಯವಾಗಲಿ `ನಮ್ಮ ಚೆಲುವ ಕನ್ನಡ ನಾಡು~ ಎಂಬ ನಾಡಗೀತೆ ಸ್ವತಂತ್ರ ಕಿಚ್ಚು ಹೊತ್ತಿಸುವ ಮೂಲಕ ಕರ್ನಾಟಕ ಏಕೀಕರಣಕ್ಕೆ ನಾಂದಿ ಹಾಡಿತು. ಇಂತಹ ಮಹಾನ್ ಕವಿಗಳ ಇತಿಹಾಸವನ್ನು ನಾಡಿಗೆ ತಿಳಿಸಬೇಕು ಎಂದು  ನರಗುಂದ ಕ್ಷೇತ್ರದ ಶಾಸಕ ಸಿ.ಸಿ.ಪಾಟೀಲರು ಹೇಳಿದರು.ತಾಲ್ಲೂಕಿನ ಹುಯಿಲಗೋಳದ ನಾರಾಯಣರಾವ್ ವರ್ತುಳದಲ್ಲಿ ಶುಕ್ರವಾರ ನಾಡ ಕವಿ ಹುಯಿಲಗೋಳ ನಾರಾಯಣರಾವ್ ಅವರ ಪುತ್ಥಳಿ ಪ್ರತಿಷ್ಟಾಪನೆ ನೆರವೇರಿಸಿ ಮಾತ ನಾಡಿದರು.  ಗ್ರಾಮ ಅಭಿವದ್ಧಿ ಮತ್ತು ದೀನ ದಲಿತರ ಕೆಲಸ ಕಾರ್ಯಗಳನ್ನು ನ್ಯಾಯಯುತವಾಗಿ ನಿಭಾಯಿಸಿದಲ್ಲಿ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ಹುಯಿಲಗೋಳ ಗ್ರಾಮದಲ್ಲಿ ಹುಯಿಲಗೋಳ ನಾರಾಯಣರಾವ್ ಅವರ ಹೆಸರಿನ ದ್ವಾರಬಾಗಿಲು ಸ್ಥಾಪನೆಗೆ  3 ಲಕ್ಷ ರೂಪಾಯಿಗಳ ಅನು ದಾನಕ್ಕೆ  ಮಂಜೂರಾತಿ ನೀಡಿದರು.    ವಿದ್ಯಾದಾನ ಶಿಕ್ಷಣ ಸಮಿತಿ  ಅಧ್ಯಕ್ಷ ಡಿ.ಬಿ. ಹುಯಿಲಗೋಳ ಮಾತನಾಡಿ,  ನಾಡಕವಿ ಹುಯಿಲಗೋಳ ನಾರಾಯಣ ರಾವ್ ಪುತ್ಥಳಿ ಪ್ರತಿಷ್ಟಾಪಿಸಿದ್ದು ಜನತೆಗೆ  ಸಂತೋಷ  ತಂದಿದೆ ಎಂದರು.ಹುಯಿಲಗೋಳ ನಾರಾಯಣರಾವ್ ರಾಜ್ಯ ಸಮಿತಿ ಅಧ್ಯಕ್ಷ ಸಿ.ಜಿ.ಬಿ. ಹಿರೇಮಠ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಮತಿ ಹುಯಿಲಗೋಳ, ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಡಿ.ಕೊಂಡಿಕೊಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಪೊಲೀಸ ಪಾಟೀಲ, ಹುಯಿಲಗೋಳ ನಾರಾಯಾಣರಾವ್ ರಾಜ್ಯ ಸಮಿತಿಯ ಎನ್.ಕೆ. ಕೊರ್ಲಹಳ್ಳಿ, ಎಂ.ಬಿ. ದೇಸಾಯಿ, ಪಾರ್ವತೆವ್ವ ದೇಸಾಯಿ ಗವಿಸಿದ್ಧಯ್ಯ ಹಳ್ಳಿಕೇರಿ  ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry