ಸೋಮವಾರ, ಮಾರ್ಚ್ 8, 2021
24 °C
ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಗೋಷ್ಠಿ: ಡಾ.ಬಲ್ಲೂರು ಹೇಳಿಕೆ

ಹುಲಸೂರು: ಐತಿಹಾಸಿಕ ಸ್ಥಳ ಕುರುಹು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಲಸೂರು: ಐತಿಹಾಸಿಕ ಸ್ಥಳ ಕುರುಹು

ಬಸವಕಲ್ಯಾಣ: ಹುಲಸೂರು 6 ನೇ ಶತಮಾನದಲ್ಲಿ ಪ್ರತ್ಯೇಕ ನಾಡಾಗಿತ್ತು. ಈ ಸ್ಥಳದ ಐತಿಹಾಸಿಕತೆ ಸಾರುವ ಶಿಲ್ಪಗಳು, ಶಿಲಾಶಾಸನಗಳು ಮತ್ತು ಇತರೆ ದಾಖಲೆ ಲಭ್ಯವಾಗಿವೆ ಎಂದು ಪ್ರಾಧ್ಯಾಪಕ ಡಾ.ಬಸವರಾಜ ಬಲ್ಲೂರ ಹೇಳಿದರು.ತಾಲ್ಲೂಕಿನ ಹುಲಸೂರನಲ್ಲಿ ಲಿಂಗೈಕ್ಯ ಬಸವಕುಮಾರ ಶಿವಯೋಗಿಗಳ 40 ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಬುಧವಾರ ಆಯೋಜಿಸಿದ್ದ 6 ನೇ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಎರಡನೆ ದಿನದ ಪ್ರಥಮ ಗೋಷ್ಠಿಯಲ್ಲಿ ಹುಲ ಸೂರ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ಅವರು ವಿಶೇಷ ಉಪನ್ಯಾಸ ನೀಡಿದರು.ಈ ಸ್ಥಳಕ್ಕೆ ಮೊದಲು ಪುಲಿಚೇರು ಎಂದು ಹೆಸರಿತ್ತು. ಪಟ್ಟಣದಲ್ಲಿ ಹಳೆ ಶಿಲಾ ದೇಗುಲಗಳು, ವಿವಿಧ ಶಿಲ್ಪಗಳು, ವೀರಗಲ್ಲು, ಮಾಸ್ತಿಗಲ್ಲು ಮುಂತಾದವು ದೊರಕುತ್ತವೆ. ಇದು ಜೈನರ ಕಾಲದಲ್ಲಿ ಮಹತ್ವದ ಸ್ಥಳವಾಗಿತ್ತು. ವಿವಿಧ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು.ನಂತರದಲ್ಲಿ ಎಲ್ಲವೂ ಹಾಳಾಗಿದೆ. ಇಲ್ಲಿ ಭಾಷಾ ಸಾಮರಸ್ಯ ಎದ್ದು ಕಾಣುತ್ತದೆ. ಇಲ್ಲಿನ ಮಹತ್ವದ ಶಿಲ್ಪಕಲಾಕೃತಿ ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.ಸಾಹಿತಿ ಡಾ.ರಘುಶಂಖ ಭಾತಂಬ್ರಾ ಮಾತನಾಡಿ, ಇಲ್ಲಿನ ಗುರುಬಸವೇಶ್ವರ ಸಂಸ್ಥಾನ ಮಠವು  ನಾಡು, ನುಡಿ ಸೇವೆ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗೆ ಹೆಸರಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಡಾ.ವಿ.ಜಿ.ಭಂಡೆ ಮಾತ ನಾಡಿ, ಚಾಲುಕ್ಯರು, ರಾಷ್ಟ್ರಕೂಟ ಕಾಲ ದಲ್ಲಿ ಕಲ್ಯಾಣನಾಡು ಮಹತ್ವದ ಸ್ಥಾನ ವಾಗಿತ್ತು. ಬಸವಣ್ಣನವರಿಂದ ಜಗದ್ವಿ ಖ್ಯಾತ ಆಗುವಂತಾಯಿತು ಎಂದರು. ಪ್ರೊ.ಭೀಮರಾವ್ ಪಾಟೀಲ ಮಾತನಾಡಿದರು.ಶಿವಾನಂದ ಸ್ವಾಮೀಜಿ, ಸಮ್ಮೇಳ ನಾಧ್ಯಕ್ಷ ಡಾ.ಗುರುಲಿಂಗಪ್ಪ ಧಬಾಲೆ, ಶರ ಣಪ್ಪ ರಾಚೋಟೆ, ಶಿವಶಂಕರ ಟೋಕರೆ ಇದ್ದರು.  ಪನ್ಯಾಸಕಿ ಮಲ್ಲಮ್ಮ ಪಾಟೀಲ ಸ್ವಾಗತಿಸಿದರು. ಚಂದ್ರಕಾಂತ ನಿರ್ಮಳೆ ನಿರೂಪಿಸಿದರು. ಶಿಖರೇಶ್ವರ ಶೆಟಗಾರ ವಂದಿಸಿದರು.ವಿಶೇಷ ಉಪನ್ಯಾಸ: ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಬುಧವಾರ ಬೆಳಿಗ್ಗೆ ಎರಡನೆ ಗೋಷ್ಠಿಯಲ್ಲಿ ವಿವಿಧ ವಿಷಯ ಗಳ ಬಗ್ಗೆ ವಿಶೇಷ ಉಪನ್ಯಾಸ ಮಂಡಿ ಸಲಾಯಿತು. ಪ್ರಾಧ್ಯಾಪಕ ಪ್ರೊ.ಕಲ್ಯಾಣರಾವ್‌ ಪಾಟೀಲ ಅವರು ನಾಡೋಜ ಡಾ.ಎಂ.ಎಂ.ಕಲ್ಬುರ್ಗಿ ಅವರ ಜೀವನ ಸಾಧನೆ ಕುರಿತು ಮಾತನಾಡಿದರು.ಭೀಮಾಶಂಕರ ಬಿರಾದಾರ ಅವರು ಸಮ್ಮೇಳನಾಧ್ಯಕ್ಷ ಡಾ.ಗುರುಲಿಂಗಪ್ಪ ಧಬಾಲೆ ಅವರ ಬದುಕು ಬರಹ ಕುರಿತು ಮಾತನಾಡಿದರು. ಡಾ.ಮೃತ್ಯುಂಜಯ ರುಮಾಲೆ ಅಧ್ಯಕ್ಷತೆ ವಹಿಸಿದ್ದರು. ಡಾ.ರಾಮಚಂದ್ರ ಗಣಾಪುರ ಮಾತನಾಡಿದರು. ಸಂತೋಷ ಹಡಪದ ಇದ್ದರು. ದೇವೇಂದ್ರ ಬರಗಾಲೆ ನಿರೂಪಿಸಿದರು.***

ಚರಿತ್ರೆ ಕಟ್ಟಲು ಬೇಕಾದ ಎಲ್ಲ ಆಕರ ಗಳು ಹೋಬಳಿ ಕೇಂದ್ರವಾದ ಹುಲಸೂರನಲ್ಲಿ ಲಭ್ಯವಾಗುತ್ತವೆ. ಸಂಶೋಧಕರಿಗೆ ಈ ಸ್ಥಳ ಕೈಬೀಸಿ ಕರೆಯುತ್ತಿದೆ.

-ಬಸವರಾಜ ಬಲ್ಲೂರ,
ಪ್ರಾಧ್ಯಾಪಕರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.