ಬುಧವಾರ, ಜನವರಿ 29, 2020
24 °C
ಪಂಚರಂಗಿ

ಹೃತಿಕ್–ಸುಸೇನ್‌ ಖಾಸಗಿ ಬದುಕಿಗೆ ಧಕ್ಕೆಯಾಗದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೃತಿಕ್–ಸುಸೇನ್‌ ಖಾಸಗಿ ಬದುಕಿಗೆ ಧಕ್ಕೆಯಾಗದಿರಲಿ

ತ್ತಿಚೆಗಷ್ಟೇ ಹೃತಿಕ್‌ರಿಂದ ವಿವಾಹ ವಿಚ್ಛೇದನ ಕೇಳಿದ ಸುಸೇನ್‌ ರೋಶನ್‌ ಅವರ ಖಾಸಗಿ ಬದುಕಿಗೆ ಧಕ್ಕೆಯಾಗದಿರಲಿ ಎಂದು ಬಾಲಿವುಡ್‌ನ ನಟ ನಟಿಯರು ಒಕ್ಕೊರಲಿನಿಂದ ಕೇಳಿಕೊಂಡಿದ್ದಾರೆ.‘ಇದು ಪರೀಕ್ಷೆಯ ಸಮಯ. ಹೃತಿಕ್‌ ರೋಷನ್‌ ತಮ್ಮನ್ನು ತಮ್ಮ ಪಾಡಿಗೆ ಬಿಡುವಂತೆ ಕೋರಿಕೊಂಡಿದ್ದಾರೆ. ಅದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈಗ ಅವರಿಗೆ ಏಕಾಂತದ ಜತೆಗೆ ಪರಿಸ್ಥಿತಿಯನ್ನು ನಿಭಾಯಿಸುವ ಶಕ್ತಿಯ ಅವಶ್ಯಕತೆ ಇದೆ‘ ಎಂದು ಅಭಿಷೇಕ್‌ ಬಚ್ಚನ್‌ ಹೇಳಿದ್ದಾರೆ.‘ಹೃತಿಕ್‌–ಸುಸೇನ್‌ ವಿಷಯದಲ್ಲಿ ಮಾಧ್ಯಮ ಕೂಡಾ ಅವರಿಗೆ ಒಂದಷ್ಟು ಏಕಾಂತ ನೀಡಿದರೆ ಉತ್ತಮ. ಇದು ಒಬ್ಬ ವ್ಯಕ್ತಿಯ ಬದುಕಿನಲ್ಲಿ ನಡೆಯಬಹುದಾದ ತೀರಾ ಖಾಸಗಿ ಸಂಗತಿ. ಹೀಗಾಗಿ ಇಬ್ಬರನ್ನೂ ಯಾವುದೇ ಪ್ರಶ್ನೆ ಕೇಳದಿದ್ದರೆ ಅದೇ ನಾವೆಲ್ಲರೂ ಅವರಿಗೆ ಮಾಡುವ ದೊಡ್ಡ ಉಪಕಾರ’ ಎನ್ನುವುದು ಕರಣ್‌ ಜೋಹರ್‌ ಮನವಿ.ಒಟ್ಟಿನಲ್ಲಿ ವಿವಾಹ ವಿಚ್ಛೇದನದ ನಿರೀಕ್ಷೆಯಲ್ಲಿರುವ ಹೃತಿಕ್‌ ಹಾಗೂ ಸುಸೇನ್ ದಂಪತಿಯ ಖಾಸಗೀತನವನ್ನು ಕಾಪಾಡಲು ಬಾಲಿವುಡ್‌ ಮನವಿ ಮಾಡಿಕೊಂಡಿದೆ.

‘ಹೃತಿಕ್‌ ನನ್ನ ತಮ್ಮನಿದ್ದಂತೆ. ನನ್ನ ಕುಟುಂಬಕ್ಕೆ ತೀರಾ ಹತ್ತಿರವಾದವರು. ಸುಸೇನ್ ಕೂಡಾ. ಇವರಿಬ್ಬರೆಂದರೆ ನನಗೆ ತುಂಬಾ ಇಷ್ಟ. ಆದರೆ ಇವರಿಬ್ಬರ ಬಾಳಿನಲ್ಲಿ ನಡೆದ ಈ ಕಹಿ ಘಟನೆಯನ್ನು ಮರೆತು ಬಹುಬೇಗ ಒಂದಾಗುತ್ತಾರೆಂಬ ವಿಶ್ವಾಸ ನನ್ನದು’

– ಅನಿಲ್‌ ಕಪೂರ್‌

ಪ್ರತಿಕ್ರಿಯಿಸಿ (+)