ಹೃದಯದ ಕಾಯಿಲೆಯೇ? ರೆಪ್ಪೆ ಪರೀಕ್ಷಿಸಿ

ಸೋಮವಾರ, ಮೇ 27, 2019
29 °C

ಹೃದಯದ ಕಾಯಿಲೆಯೇ? ರೆಪ್ಪೆ ಪರೀಕ್ಷಿಸಿ

Published:
Updated:

ಲಂಡನ್, (ಪಿಟಿಐ): ನಿಮಗೆ ಹೃದಯದ ತೊಂದರೆ ಇದೆ ಎನ್ನುವುದನ್ನು ತಿಳಿದುಕೊಳ್ಳಬೇಕೆ? ಹಾಗಾದರೆ ನಿಮ್ಮ ಕಣ್ಣಿನ ರೆಪ್ಪೆಗಳನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ.  ಕಣ್ಣಿನ ಸುತ್ತ ಇರುವ ಚರ್ಮದ ಮೇಲೆ ಹಳದಿ ಕಲೆಗಳಿದ್ದರೆ ಹೃದಯದ ಕಾಯಿಲೆ ಇದೆ ಎಂದರ್ಥ ಎನ್ನುತ್ತದೆ  ಹೊಸ ಅಧ್ಯಯನ.  ಇದಕ್ಕಾಗಿ ಡೆನ್ಮಾರ್ಕ್‌ನ ಸಂಶೋಧಕರು ಸುಮಾರು 13,000 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಿದ್ದರು ಎಂದು `ಬ್ರಿಟಿಷ್ ಮೆಡಿಕಲ್ ಜರ್ನಲ್~ ವರದಿ ಮಾಡಿದೆ.  ಇವು ಕೊಲೆಸ್ಟರಾಲ್ ಕಲೆಗಳಾಗಿದ್ದು  ಕಣ್ಣಿನ ದೃಷ್ಟಿಗೆ ಯಾವುದೇ ತೊಂದರೆ ಸಂಭವಿಸದು. ಜನ ಸಾಮಾನ್ಯವಾಗಿ ಈ ಕಲೆಗೆ ಚರ್ಮರೋಗ ತಜ್ಞರಿಂದ ಔಷಧಿ ಮಾಡಿಸಿಕೊಳ್ಳುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry