ಬುಧವಾರ, ಜೂನ್ 23, 2021
24 °C

ಹೆಚ್ಚುತ್ತಿರುವ ಬಾಹ್ಯಾಕಾಶ ತ್ಯಾಜ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌ (ಪಿಟಿಐ): ಭೂ ಉಪಗ್ರಹ ಕಕ್ಷೆಯ ಸುತ್ತಲೂ ಬಾಹ್ಯಾಕಾಶ ತ್ಯಾಜ್ಯ ಹೆಚ್ಚುವ ಲಕ್ಷಣ­ಗ­ಳಿದ್ದು, ಭವಿಷ್ಯದಲ್ಲಿ ಉಪಗ್ರಹ ಉಡಾ­ವಣೆ ಕಷ್ಟಕರ­ವಾಗಲಿದೆ ಎಂದು ವಿಜ್ಞಾನಿ­ಗಳು ಎಚ್ಚರಿಕೆ ನೀಡಿದ್ದಾರೆ.ಮಾನವ ನಿರ್ಮಿತ ವಸ್ತುಗಳ ತ್ಯಾಜ್ಯ  ಬಾಹ್ಯಕಾಶದಲ್ಲಿ ವಿಷಮತೆಯ ಹಂತ ತಲುಪಲಿದೆ ಎಂದು ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ)ಯ ಸಂಶೋಧಕರು ತಿಳಿಸಿದ್ದಾರೆ.ಬಾಹ್ಯಾಕಾಶದಲ್ಲಿ ತ್ಯಾಜ್ಯದ ಪ್ರಮಾಣ ಜಾಸ್ತಿಯಾಗಿ ಅವು ಒದ­ಕ್ಕೊಂದು ಡಿಕ್ಕಿ ಹೊಡೆದು ಕಣಗಳು ಸೃಷ್ಟಿಯಾಗುತ್ತವೆ. ಈ ಕಣಗಳು ಮುಂದೆ ಬಾಹ್ಯಾಕಾಶ ಕಸದ­ತೊಟ್ಟಿಗೆ ಮೂಲವಾ­ಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.‘ಉಪಗ್ರಹಗಳ ಉಡಾವಣೆ ಇದೇ ರೀತಿ ಮುಂದುವರಿದರೆ ತ್ಯಾಜ್ಯಗಳು ಡಿಕ್ಕಿಯಾಗುವ ಪ್ರಮಾಣ ಶೀಘ್ರದಲ್ಲೇ ಈಗಿರುವುದ­ಕ್ಕಿಂತಲೂ 25 ಪಟ್ಟು ಹೆಚ್ಚಾಗಲಿದೆ. ಇದರಿಂದಾಗಿ ಉಪಗ್ರಹ­ಗಳು ಭೂ ಕಕ್ಷೆಯ ಸಮೀಪ ಸುತ್ತುವುದು ಅಸಾಧ್ಯ­ವಾಗಲಿದೆ’ ಎಂದು ಇಎಸ್‌ಎ  ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.