ಬುಧವಾರ, ಏಪ್ರಿಲ್ 14, 2021
24 °C

ಹೆಚ್ಚುವರಿ ಎಲ್‌ಪಿಜಿ ಆನ್‌ಲೈನ್‌ನಲ್ಲೇ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಒಂದಕ್ಕಿಂತ ಹೆಚ್ಚಿರುವ ಎಲ್‌ಪಿಜಿ ಸಂಪರ್ಕವನ್ನು ಇನ್ನು ಮುಂದೆ ಆನ್‌ಲೈನ್ ಮೂಲಕ ಸರ್ಕಾರಕ್ಕೆ ಒಪ್ಪಿಸಬಹುದು.ಅದಕ್ಕಾಗಿ ಗ್ರಾಹಕರು ಮಾಡಬೇಕಾಗಿರುವುದು ಇಷ್ಟೆ- ಆಯಾ ಕಂಪೆನಿಗಳ ವೆಬ್‌ಸೈಟ್‌ಗೆ ಭೇಟಿ ನೀಡಿ ಸಂಪರ್ಕ ಒಪ್ಪಿಸುವ ಸಂಬಂಧ  (ಸರೆಂಡರ್) ವಿವರಗಳನ್ನು ದಾಖಲಿಸಬೇಕು.ನಂತರ ಕಂಪೆನಿಯೇ ಗ್ರಾಹಕರ ಮನೆಗೆ ಬಂದು ಹೆಚ್ಚುವರಿ ಸಂಪರ್ಕಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತದೆ.`ಎಲ್‌ಪಿಜಿ ಡೀಲರ್‌ಗಳಿಂದ ತೊಂದರೆ ಅನುಭವಿಸುತ್ತಿರುವ ಬಗ್ಗೆ ನಮಗೆ ಗ್ರಾಹಕರಿಂದ ಸಾಕಷ್ಟು ದೂರುಗಳು ಬಂದಿವೆ. ದೇಶದಲ್ಲಿರುವ ಪ್ರತಿ ವಿತರಕರನ್ನು ಗುರುತಿಸಿ ಶಿಕ್ಷಿಸುವುದು ಕಷ್ಟ. ಹಾಗಾಗಿ ಗ್ರಾಹಕರಿಗೂ ಸುಲಭವಾಗುವ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ~ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.`ಒಂದು ಕುಟುಂಬಕ್ಕೆ ಒಂದು ಸಂಪರ್ಕ~ ಎಂಬ ನಿಯಮವನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಜಾರಿಗೆ ತರುತ್ತಿದ್ದು, ಗ್ರಾಹಕರು ತಾವು ಹೊಂದಿರುವ ಹೆಚ್ಚುವರಿ ಸಂಪರ್ಕವನ್ನು ಸ್ವಯಂ ಪ್ರೇರಿತರಾಗಿ ಸರ್ಕಾರಕ್ಕೆ ಒಪ್ಪಿಸಲು ಮನವಿ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.