ಗುರುವಾರ , ಏಪ್ರಿಲ್ 22, 2021
25 °C

ಹೆಚ್ಚು ಉದ್ಯೋಗ ಸೃಷ್ಟಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಐಎಎನ್‌ಎಸ್): ಬಡತನ ಮತ್ತು ನಿರುದ್ಯೋಗ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇನ್ನಷ್ಟು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಇನ್ಫೋಸಿಸ್‌ನ ವಿಶ್ರಾಂತ ಅಧ್ಯಕ್ಷ ಎನ್.ಆರ್.ನಾರಾಯಣಮೂರ್ತಿ ಗಮನ ಸೆಳೆದಿದ್ದಾರೆ.`ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಉತ್ತೇಜನ ನೀಡುವ ಮೂಲಕ ಲಕ್ಷಾಂತರ ಉದ್ಯೋಗಾವಕಾಶ ಸೃಷ್ಟಿಸಬಹುದು. `ಎಫ್‌ಡಿಐ~ ಮತ್ತು ಉದ್ಯಮಶೀಲತೆ ಮೂಲಕ ಬಡ ವರ್ಗದ ಯುವ ಸಮೂಹ ಗುಣಮಟ್ಟದ ಜೀವನ ಸಾಗಿಸಲು ಸರ್ಕಾರ ಅವಕಾಶ ಕಲ್ಪಿಸಿಕೊಡಬೇಕು~ ಎಂದು ಅವರು ಶುಕ್ರವಾರ ಇಲ್ಲಿ ಶಿಕ್ಷಣ ಸಂಸ್ಥೆಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.`ಸರ್ಕಾರದ ಯೋಜನೆಗಳು ಉದ್ಯೋಗಾವಕಾಶ ಸೃಷ್ಟಿಸುತ್ತಿಲ್ಲವೇ? ಎಂಬ ಪ್ರಶ್ನೆಗೆ ಮೂರ್ತಿ `ಸುಮ್ಮನೆ ಸರ್ಕಾರವನ್ನು ಟೀಕಿಸುವುದು ಸರಿಯಲ್ಲ. ನಾವೆಲ್ಲ ಜತೆಗೂಡಿ  ಕಾರ್ಯನಿರ್ವಹಿಸಬೇಕು~   ಎಂದರು.ಕೋಲ್ಕತ್ತ ಘಟಕ- ವಿಶ್ವಾಸ: ಕೋಲ್ಕತ್ತ ದಲ್ಲಿ ಇನ್ಫೋಸಿಸ್ ಘಟಕ  ಖಂಡಿತ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, `ಈ ವಿಚಾರದಲ್ಲಿ ಸಂಶಯ ಬೇಡ. ಎಲ್ಲ ಸಮಸ್ಯೆಗಳಿಗೂ ಖಂಡಿತ ಪರಿಹಾರವಿದೆ. ಈ ಘಟಕದಿಂದ ಐದು ಸಾವಿರ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎಂದಿದ್ದಾರೆ.ಪಶ್ಚಿಮ ಬಂಗಾಳ ಸರ್ಕಾರ ಇನ್ಫೋಸಿಸ್‌ಗೆ ಘಟಕ ಆರಂಭಿಸಲು ಇಲ್ಲಿಗೆ ಸಮೀಪದ ರಾಜರಾತ್ ಬಳಿ 50 ಏಕರೆ ಮಂಜೂರು ಮಾಡಿದೆ. ಆದರೆ, ಇನ್ಫೋಸಿಸ್ ಈ ಘಟಕಕ್ಕೆ ವಿಶೇಷ ಆರ್ಥಿಕ ವಲಯ(ಎಸ್‌ಇಜೆಡ್) ಸ್ಥಾನ ಮಾನ ನೀಡಬೇಕೆಂದು ಆಗ್ರಹಿಸುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.