ಶನಿವಾರ, ಮೇ 21, 2022
27 °C

ಹೆಡ್ಲಿ, ರಾಣಾ ಪ್ರಶ್ನಿಸಲು ಮನವಿ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ  (ಪಿಟಿಐ): 26/11ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇವಿಡ್ ಹೆಡ್ಲಿ ಹಾಗೂ ಆತನ ಸಹಚರ ತಹಾವುರ್ ರಾಣಾನನ್ನು ಪ್ರಶ್ನೆಗೊಳಪಡಿಸಲು ಅನುಮತಿ ನೀಡುವಂತೆ ಇಲ್ಲಿನ ಮೆಟ್ರೊಪಾಲಿಟನ್ ಕೋರ್ಟ್, ಅಮೆರಿಕದ ನ್ಯಾಯಾಲಯಕ್ಕೆ ಮನವಿ ಪತ್ರ (ಲೆಟರ್ ಆಫ್ ರೊಗೆಟರಿ) ಕಳುಹಿಸಿದೆ.



`37ನೇ ಮೆಟ್ರೊಪಾಲಿಟನ್ ನ್ಯಾಯಾಲಯ ಸೋಮವಾರ ಈ ಪತ್ರಕ್ಕೆ ಸಹಿ ಹಾಕಿದ್ದು, ಗೃಹ ಹಾಗೂ ವಿದೇಶಾಂಗ ಸಚಿವಾಲಯದ ಮೂಲಕ ಪತ್ರವನ್ನು ಅಮೆರಿಕದ ನ್ಯಾಯಾಲಯಕ್ಕೆ ಕಳುಹಿಸಲಾಗುತ್ತದೆ~ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಹಿಮಾಂಶು ರಾಯ್ ತಿಳಿಸಿದ್ದಾರೆ. ನ್ಯಾಯಾಂಗ ತನಿಖೆಗೆ ನೆರವು ನೀಡುವಂತೆ ಕೋರಲು ಒಂದು ದೇಶ ಇನ್ನೊಂದು ದೇಶಕ್ಕೆ ಕಳುಹಿಸುವ ಅಧಿಕೃತ ಮನವಿ ಪತ್ರ ಇದಾಗಿದೆ.



`ಅಮೆರಿಕದ ಕೋರ್ಟ್ ಈ ಪತ್ರವನ್ನು ಸ್ವೀಕರಿಸುತ್ತದೆ, ಹೆಡ್ಲಿ ಹಾಗೂ ರಾಣಾನನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುತ್ತದೆ ಎಂದು ಭಾವಿಸುತ್ತೇವೆ. ಇದರಿಂದ ನಾವು ಈ ಇಬ್ಬರಿಗೆ ಮುಂಬೈನಲ್ಲಿ ಇರುವ ಸಂಪರ್ಕಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ~ ಎಂದು ಅಪರಾಧ ವಿಭಾಗದ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.



ಮುಂಬೈ ದಾಳಿಯಲ್ಲಿ ಹೆಡ್ಲಿಯ ಪಾತ್ರವನ್ನು ತಿಳಿದುಕೊಳ್ಳಲು ಕಳೆದ ವರ್ಷ ಜೂನ್‌ನಲ್ಲಿ ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಆತನನ್ನು ಒಂದು ವಾರ ಕಾಲ ನೇರವಾಗಿ ವಿಚಾರಣೆಗೆ ಒಳಪಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.