ಗುರುವಾರ , ಮೇ 19, 2022
21 °C

ಹೆದ್ದಾರಿಯಲ್ಲಿ ನಿಲ್ಲದ ಅಪಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ತಾಲ್ಲೂಕಿನಲ್ಲಿ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆ ಹಲವು ವರ್ಷಗಳು ಕಳೆದರೂ ಸುಧಾರಣೆ ಆಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಇದರಿಂದ  ಈ ರಸ್ತೆ ಮೇಲೆ ಚಲಿಸುವ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.ಪಟ್ಟಣ ಹೃದಯ ಭಾಗದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ 20 ವರ್ಷಗಳ ಹಿಂದೆ ಎನ್‌ಎಚ್4 ಪಥ ನಿರ್ಮಿಸಲಾಗಿತ್ತು.ಹೊರ ವಲಯದ ಮದ್ರಾಸದಿಂದ ನಂಗಲಿಯವರೆಗಿನ ಮಾರ್ಗದಲ್ಲಿ ಪ್ರತಿ ದಿನ ಅಪಘಾತ ನಡೆಯುತ್ತಿವೆ. ಹೆದ್ದಾರಿ ರಸ್ತೆ ವಿಸ್ತರಣೆ ಕಾರ್ಯ ಕೆ.ಆರ್.ಪುರಂನಿಂದ ಪಟ್ಟಣದ ಹೊರವಲಯದ ಮದರಾಸವರೆಗೂ ನಡೆದು ಸ್ಥಗಿತಗೊಂಡಿದೆ. ಹೆದ್ದಾರಿ ಅಕ್ಕಪಕ್ಕದ ಜಮೀನಿನ ರೈತರು ಹಾಗೂ ಜನರು ಹೆದ್ದಾರಿ ರಸ್ತೆ ವಿಸ್ತರಣೆ ಜಮೀನು ನೀಡಿದ್ದರೂ ಕಾರ್ಯಗತವಾಗಿಲ್ಲ ಎನ್ನುವುದು ಸ್ಥಳೀಯರ ಮಾತು.ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತ ನಾಡಿದ  ಕಪ್ಪಲಗೊಡು ಗ್ರಾಮದ ನಟರಾಜ್ `ಕನಿಷ್ಠ ವಾಹನ ದಟ್ಟಣೆಯಿಂದ ಹಾಳಾದ ರಸ್ತೆಯನ್ನು ಸರಿ ಪಡಿಸುವ ಗೋಜಿಗೆ ಹೋಗದಿರುವುದು ವಿಷಾದನೀಯ~ ಎನ್ನುತ್ತಾರೆ.

ಪ್ರತಿದಿನ ವಾಹನ ಸವಾರರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಹೆದ್ದಾರಿ ಮೇಲೆ ಚಲಿಸುವಂತಾಗಿದೆ.ರಸ್ತೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಕಾಣುತ್ತಿವೆ. ಇದರಿಂದ ದೂಳು ಹೆಚ್ಚಾಗುತ್ತಿದೆ.  ರಸ್ತೆಯಲ್ಲಿ ಹಳ್ಳಕೊಳ್ಳಗಳು ರೂಪತಾಳಿವೆ ಎನ್ನುವುದು ತಾತಿಕಲ್ಲು ಗ್ರಾಮದ ಮಂದಾವಲ ಕೃಷ್ಣಪ್ಪ.ನಂಗಲಿ ಗಡಿ ಭಾಗದ ರಸ್ತೆ ಅಭಿವದ್ಧಿಗೆ ಮುಂದಾಗದಿರುವುದು ರಸ್ತೆ ಅಪಘಾತಗಳು ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿವೆ.ಹಲವು ಬಾರಿ ಈ ರಸ್ತೆಯ  ಗುಂಡಿಗಳಲ್ಲಿ ವಾಹನ ಸವಾರರು ಬಿದ್ದು ಗಾಯಮಾಡಿಕೊಂಡಿ ರುವುದು ಕಣ್ಣಾರೆ ಕಂಡಿದ್ದೇನೆ ಎಂದು ನೋವಿನಿಂದ ನುಡಿಯುತ್ತಾರೆ ಸಂಗಸಂದ್ರ ರಾಮಚಂದ್ರ.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕನಿಷ್ಠ ಗಮನ ಹರಿಸಿದರೆ ರಸ್ತೆ ಸುಧಾರಣೆ ಯಾಗುತ್ತದೆ. ಆದರೆ ಆ ಕೆಲಸ ಆಗುತ್ತಿಲ್ಲ ಎಂದು ವಿಷಾದಿಸುತ್ತಾ ಕಪ್ಪಲಮೊಡಗು ಗ್ರಾಮದ ನಟರಾಜ್.ರಸ್ತೆ ದುರಸ್ತಿ ಬಗ್ಗೆ ಹಲವು ಸಾರಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಈ ಕೂಡಲೇ ಗಮನ ಹರಿಸಿದರೆ ಅಪಘಾತಗಳು ತಡೆಯಲು ಸಾಧ್ಯ ಎನ್ನುವುದು ಹೆಸರು ಹೇಳಲು ಬಯಸದ ಪೊಲೀಸರ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.