ಹೊಸಪೇಟೆ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಸೋಲಾಪುರ–ಬೆಂಗಳೂರು ಮತ್ತು ಅಂಕೋಲಾ –ಗುತ್ತಿ ರಾಷ್ಟ್ರೀಯ ಹೆದ್ದಾರಿಗಳು ಸಂದಿ ಸುವ ಸ್ಥಳದಲ್ಲಿ ನಿರ್ಮಿಸಿರುವ ಸುರಂಗ ಮಾರ್ಗದ ಮೊದಲ ಹಂತ ಶುಕ್ರವಾರ ಸಾರ್ವಜನಿಕರ ಬಳಕೆಗೆ ಮುಕ್ತ ವಾಯಿತು.

ನಗರದ ಹೊರ ವಲಯದಲ್ಲಿ ಈ ಎರಡು ರಾಷ್ಟ್ರೀಯ ಹೆದ್ದಾರಿಗಳು ಕೂಡುವ ಸ್ಥಳದಲ್ಲಿ ರೈಲು ಮಾರ್ಗ ಹಾದು ಹೋಗಿದ್ದು ಬೆಟ್ಟಗಳ ಸಾಲಿನ ಮಧ್ಯೆ ಕಡಿದಾದ ರಸ್ತೆ ಮಾರ್ಗ ಇದ್ದುದರಿಂದ ವಾಹನ ಸಂಚಾರ ದುಸ್ತರವಾಗಿತ್ತು. ಸುರಂಗ ಮಾರ್ಗ ನಿರ್ಮಾಣದಿಂದಾಗಿ ಟ್ರಾಫಿಕ್ ಜಾಮ್ ಕಿರಿಕಿ ರಿಯಿಂದ ಸಾರ್ವಜನಿಕರಿಗೆ ಮುಕ್ತಿ ದೊರೆತಂತಾಗಿದೆ. ಸುರಂಗ ಮಾರ್ಗದ ಮೇಲೆ ರೈಲ್ವೆ ಮಾರ್ಗ ಇರುವುದರಿಂದ ಲೆವೆಲ್ ಕ್ರಾಸಿಂಗ್ನಲ್ಲಿ ಕಾಯುವ ತೊಂದರೆ ನಿವಾರಣೆಯಾಗಿದೆ.

ಬೃಹತ್ ಯೋಜನೆ: ಹುನಗುಂದ–ಹೊಸಪೇಟೆ ಹೆದ್ದಾರಿಯನ್ನು ಷಟ್ ಪಥ ಮಾರ್ಗವನ್ನಾಗಿ ಪರಿವರ್ತಿಸಿ ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಸುರಂಗ ಮಾರ್ಗದ ಕಾಮಗಾರಿ ಮಾತ್ರ ಬಾಕಿ ಇತ್ತು. ರೂ 57.7 ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗದ ಕಾಮ ಗಾರಿಯನ್ನು ಕೈಗೆತ್ತಿಕೊ ಳ್ಳಲಾಗಿತ್ತು.

ಒಟ್ಟಾರೆ 699 ಮೀಟರ್ ಉದ್ದದ ಈ ಮಾರ್ಗ ದಲ್ಲಿ ಬಲ ಭಾಗದ ಮಾರ್ಗ ಮಾತ್ರ ಈಗ ಸಾರ್ವ ಜನಿಕರಿಗೆ ಮುಕ್ತವಾಗಿದೆ. ಈ ಮಾರ್ಗದಲ್ಲಿ ಏಕಕಾ ಲಕ್ಕೆ ಮೂರು ವಾಹನಗಳು ಸಂಚರಿಸಬ ಹುದಾಗಿದೆ. ಸುರಂಗದ ಆರಂಭಿಕ ಎತ್ತರ 5.5 ಮೀಟರ್ ಎತ್ತರ ವಿದ್ದು, ಮಧ್ಯೆದಲ್ಲಿ 8.6 ಮೀಟರ್ ಇದೆ.

ಸುರಂಗ ಮಾರ್ಗದ ಕಾಮಗಾ ರಿಯನ್ನು ಆಂಧ್ರಪ್ರ ದೇಶದ ಜಿಎಂಆರ್ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು. 2012ರ ಜನವರಿಯಲ್ಲಿ ಕಾಮಗಾರಿ ಆರಂಭ ವಾಗಿತ್ತು. ಎರಡನೇ ಹಂತದ ಕಾಮಗಾರಿ ಕೂಡ 2014ರ ಫೆಬ್ರುವರಿ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ವಿಶ್ವಾಸ ವ್ಯಕ್ತಪ ಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 13 ಮತ್ತು ರಾಷ್ಟ್ರೀಯ ಹೆದ್ದಾರಿ 63 ಸಂದಿಸುವ ಸ್ಥಳದಲ್ಲಿಯೇ ರೈಲ್ವೆ ಲೆವೆಲ್ ಕ್ರಾಸಿಂಗ್ ಇತ್ತು. ಈ ಮಾರ್ಗದಲ್ಲಿ ಸರಕು ಸಾಗಣೆ ರೈಲು ಸಂಚಾರ ಅಧಿಕವಾಗಿ ರುವುದರಿಂದ ಒಮ್ಮೆ ಗೇಟ್ ಹಾಕಿದರೆ ತಾಸುಗಟ್ಟಲೇ ವಾಹನಗಳು ಎರಡು ಕಡೆ ನಿಂತಿರುತ್ತಿದ್ದವು. ದಿನದ 16 ಗಂಟೆಗಳ ಕಾಲ ವಾಹನ ಸಂಚಾ ರಕ್ಕೆ ತೀವ್ರ ತೊಂದರೆಯಾ ಗುತ್ತಿತ್ತು. ಈ ತೊಂದರೆ ತಪ್ಪಿಸಲು ಸುರಂಗ ಮಾರ್ಗ ನಿರ್ಮಾಣಕ್ಕೆ ಸರ್ಕಾರ ಮುಂದಾ ಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.