ಬುಧವಾರ, ಜೂನ್ 23, 2021
29 °C

ಹೆರಿಗೆ ರಜೆ ತಾರತಮ್ಯ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರ ತನ್ನ ಮಹಿಳಾ ನೌಕರರಿಗೆ 2008ನೇ ಸಾಲಿನಿಂದ  6 ತಿಂಗಳು ಪ್ರಸೂತಿ ರಜೆ ಮತ್ತು ಮಗುವಿನ  ಶುಶ್ರೂಷೆಗೆ ಎರಡು ವರ್ಷ ರಜೆ ಸೌಲಭ್ಯ ನೀಡಿ ಆದೇಶ ಹೊರಡಿಸಿದೆ.ರಾಜ್ಯ ಸರ್ಕಾರ ತನ್ನ ಮಹಿಳಾ ನೌಕರರಿಗೆ  ನಾಲ್ಕೂವರೆ ತಿಂಗಳು ಪ್ರಸೂತಿ ರಜೆಯನ್ನು ಮಾತ್ರ ನೀಡುತ್ತಿದೆ. ಮಗುವಿನ ಶುಶ್ರೂಷೆಗೆ ರಜೆ ನೀಡುತ್ತಿಲ್ಲ.ಇತ್ತೀಚಿನ ಒಂದು ಪ್ರಕರಣದಲ್ಲಿ ಶಶಿಕಲಾ ಎಂಬ ಸರ್ಕಾರಿ ನೌಕರ ಮಹಿಳೆಗೆ 6 ತಿಂಗಳು ಪ್ರಸೂತಿ ರಜೆ ಮತ್ತು ಮಗುವಿನ ಶುಶ್ರೂಷೆಗೆ 2 ವರ್ಷ ರಜೆ ನೀಡುವಂತೆ ನ್ಯಾಯಾಲಯವೊಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

 

ಈ ಸೌಲಭ್ಯವನ್ನು ರಾಜ್ಯ ಸರ್ಕಾರದ ಎಲ್ಲ ಮಹಿಳಾ ನೌಕರರಿಗೆ ನೀಡುವ ಆದೇಶ ಹೊರಡಿಸಬೇಕೆಂದು ವಿನಂತಿಸುತ್ತೇನೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.