ಶುಕ್ರವಾರ, ಜನವರಿ 24, 2020
17 °C

ಹೈಕಮಾಂಡ್‌ ಭೇಟಿ ಬಳಿಕ ಅಭ್ಯರ್ಥಿ ಆಯ್ಕೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಕಾಂಗ್ರೆಸ್‌ ಹೈ­ಕಮಾಂಡ್‌ ನಾಯಕರ ಜೊತೆ ಸಮಾ­ಲೋಚನೆ ನಡೆಸಿದ ಬಳಿಕವೇ ಲೋಕ­ಸಭಾ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ಆರಂಭಿಸಲು ಸಿದ್ಧಪಡಿಸಲು ಶನಿವಾರ ನಡೆದ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.ಸಂಭವನೀಯ ಅಭ್ಯರ್ಥಿಗಳ ಕುರಿತು ಕೆಪಿಸಿಸಿ ವೀಕ್ಷಕರು ಲೋಕಸಭಾ ಕ್ಷೇತ್ರಗ­ಳಿಗೆ ಭೇಟಿನೀಡಿದ ಬಳಿಕ ಸಲ್ಲಿಸಿದ ವರದಿ ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಿತಿಗಳು ಕಳುಹಿಸಿರುವ ಶಿಫಾರಸು­ಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯ­ಬೇಕಿತ್ತು. ಆದರೆ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಅವರು ಸಭೆಯಲ್ಲಿ ಹಾಜರಿರದ ಕಾರಣ ಈ ವರದಿಗಳ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.ಅಭ್ಯರ್ಥಿ ಆಯ್ಕೆಗೆ ಮಾನದಂಡ: ಲೋಕ­-­­ಸಭಾ ಚುನಾವಣೆಗೆ ಅಭ್ಯರ್ಥಿ­ಗಳಾಗುವವರು ಕನಿಷ್ಠ ಐದು ವರ್ಷ ಕಾಲ ಪಕ್ಷ ಸಂಘಟನೆಗೆ ದುಡಿದಿರ­ಬೇಕು, ಕ್ರಿಮಿನಲ್‌ ಹಿನ್ನೆಲೆ ಉಳ್ಳವ­ರಾಗಿರಬಾರದು ಎಂಬ ಮಾನ­ದಂಡ ಪ್ರಮುಖವಾಗಿ ಅಳವಡಿಸಿ­ಕೊಳ್ಳಲು ಸಭೆಯಲ್ಲಿ ತೀರ್ಮಾನಿಸ­ಲಾಗಿದೆ.‘ಎಲ್ಲ ಹಾಲಿ ಸಂಸದರಿಗೆ ಟಿಕೆಟ್‌ ನೀಡಬೇಕು ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಅಂತರ­ದಿಂದ ಸೋತವರಿಗೂ ಟಿಕೆಟ್ ನೀಡ­ಬೇಕು ಎಂಬ ಒಲವು ಸಭೆಯಲ್ಲಿ ವ್ಯಕ್ತವಾಗಿದೆ. ಹೊಸ ಮುಖಗಳಿಗೆ ಆದ್ಯತೆ ದೊರೆಯಬೇಕು. ಎಲ್ಲ ಜಾತಿ, ಧರ್ಮಗಳಿಗೆ ನಿಗದಿತ ಪ್ರಾತಿ-­ನಿಧ್ಯ ಕಲ್ಪಿಸಬೇಕು ಎಂಬ ಚರ್ಚೆ ನಡೆ­ದಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.ಚರ್ಚೆ ಬಳಿಕ ಸಭೆ: ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಕುರಿತು ಕಾಂಗ್ರೆಸ್‌ ಹೈ­ಕಮಾಂಡ್‌ ಈಗಾಗಲೇ ವಿವಿಧ ಮೂಲ­ಗಳಿಂದ ರಹಸ್ಯ ವರದಿಗಳನ್ನು ಪಡೆದು­ಕೊಂಡಿದೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಪಕ್ಷದ ವರಿಷ್ಠರ ಜೊತೆ ಚರ್ಚೆ ನಡೆಸಬೇಕು. ಬಳಿಕ ಮತ್ತೊಮ್ಮೆ ಸಭೆ ನಡೆಸಿ ಕೆಪಿಸಿಸಿ ಬಳಿ ಇರುವ ವರದಿಗಳ ಕುರಿತು ಚರ್ಚಿಸ­ಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.ಸಿದ್ದರಾಮಯ್ಯ ಮತ್ತು ಪರ­ಮೇಶ್ವರ್‌ ಅವರು ಹೈಕಮಾಂಡ್‌ ಭೇಟಿಗಾಗಿ ಒಂದೆರಡು ದಿನಗಳಲ್ಲಿ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಬಳಿಕ 15 ದಿನಗಳೊಳಗೆ ದಿಗ್ವಿಜಯ್‌ ಸಿಂಗ್‌ ನೇತೃತ್ವದಲ್ಲಿ ಚುನಾ­ವಣಾ ಸಮಿತಿ ಸಭೆ ನಡೆಯ­ಲಿದೆ. ಸಭೆಯಲ್ಲಿ ಸಂಭವನೀಯ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಸ­ಲಾಗುವುದು ಎಂದು ಮುಖಂಡ­ರೊಬ್ಬರು ತಿಳಿಸಿದರು.ಅಭ್ಯರ್ಥಿಗಳ ಆಯ್ಕೆಯಲ್ಲಿ ಸ್ಥಳೀಯ ಮುಖಂಡರ ಅಭಿಪ್ರಾಯಕ್ಕೂ ಮಾನ್ಯತೆ ನೀಡಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಪಕ್ಷದ ಸ್ಥಳೀಯ ಮುಖಂಡರ ಜೊತೆ ಚರ್ಚಿಸಿ ಅಭಿ­ಪ್ರಾಯ ಸಂಗ್ರಹಿಸುವರು ಎಂದರು.ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಚುನಾ­ವಣಾ ಸಮಿತಿ ಸಭೆಯಲ್ಲಿ ಮುಖ್ಯ­ಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿ­ಪ್ರಸಾದ್, ಎಐಸಿಸಿ ಕಾರ್ಯದರ್ಶಿ­ಗಳಾದ ಶಾಂತಾರಾಂ ನಾಯ್ಕ್, ಡಾ.­ಚೆಲ್ಲ­ಕುಮಾರ್, ಸಚಿವ ಕೆ.ಜೆ.­ಜಾರ್ಜ್, ಶಾಸಕರಾದ ಡಿ.ಕೆ.ಶಿವ­ಕುಮಾರ್, ಕೆ.ಬಿ.ಕೋಳಿವಾಡ, ವಿಧಾನ ಪರಿಷತ್‌ ಸದಸ್ಯ ವೀರಣ್ಣ ಮತ್ತಿಕಟ್ಟಿ ಇದ್ದರು.

ಪ್ರತಿಕ್ರಿಯಿಸಿ (+)