ಗುರುವಾರ , ಜನವರಿ 23, 2020
28 °C

ಹೈಕೋರ್ಟ್‌ ಆದೇಶದಂತೆ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸುವ ಕುರಿತು ಹೈಕೋರ್ಟ್‌ ಆದೇಶದ ಅನುಸಾರ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು, ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತಿತರರು ಹೈ­ಕೋರ್ಟ್‌ ಆವರಣದಲ್ಲಿರುವ ಅಡ್ವೊ­ಕೇಟ್‌ ಜನರಲ್‌ ಕಚೇರಿಯಲ್ಲಿ ಮಂಗಳ­ವಾರ ಸಭೆ ನಡೆಸಿದರು.ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಬೇಕು ಎಂದು ಕೋರಿ ಸಮಾಜ ಪರಿವರ್ತನ ಸಮುದಾಯದ ಮುಖಂಡ ಎಸ್‌.ಆರ್‌. ಹಿರೇಮಠ ಮತ್ತು ‘ನಮ್ಮ ಬೆಂಗಳೂರು’ ಪ್ರತಿ­ಷ್ಠಾನ ಸಲ್ಲಿಸಿರುವ ಅರ್ಜಿಗಳ ವಿಚಾ­ರಣೆ ನಡೆಸುತ್ತಿರುವ ಹೈಕೋರ್ಟ್‌ ವಿಭಾಗೀಯ ಪೀಠ, ಈ ಸಂಬಂಧ ಸಭೆ ನಡೆಸುವಂತೆ ಸೂಚಿಸಿತ್ತು.ಬೆಂಗಳೂರಿನಲ್ಲಿ ನಡೆದಿರುವ ಜಮೀನು ಒತ್ತುವರಿಯನ್ನು ಪರಿ­ಶೀಲಿಸಿ, ವಿವರ ನೀಡಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿ­ಕಾರದ (ಬಿಡಿಎ) ಅಧಿಕಾರಿಗಳು ಸಭೆ­ಯಲ್ಲಿ ತಿಳಿಸಿದ್ದಾರೆ ಎಂದು ಗೊತ್ತಾ­ಗಿದೆ. ಜಮೀನು ದಾಖಲೆಗಳನ್ನು ಪರಸ್ಪರ ಹಂಚಿಕೊಂಡು, ಒತ್ತುವರಿ ತಡೆಯುವಲ್ಲಿ ಸಹಕರಿಸಲು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮತಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)