ಹೊಳಲ್ಕೆರೆ ತಾಲ್ಲೂಕು ಹೊರಕೆರೆ ದೇವರಪುರ ಎಂಬ ಐತಿಹಾಸಿಕ ಗ್ರಾಮ ಲಕ್ಷ್ಮೀ ನರಸಿಂಹಸ್ವಾಮಿಯಿಂದ ರಾಜ್ಯದೆಲ್ಲೆಡೆ ಪ್ರಸಿದ್ಧಿ ಪಡೆದಿದೆ. ಅರೆಮಲೆನಾಡು ಖ್ಯಾತಿಯ ಈ ಭಾಗದಲ್ಲಿ ಕಪ್ಪು ಮತ್ತು ಕೆಂಪುಮಣ್ಣಿನ ಭೂಮಿಯಿದೆ. ರೈತರು ಮೆಕ್ಕೆಜೋಳ, ಹತ್ತಿ, ರಾಗಿ ಅಡಿಕೆ ಹೆಚ್ಚಾಗಿ ಬೆಳೆಯುತ್ತಾರೆ. ರೈತರ ಅರ್ಥಿಕ ಸಬಲತೆ ಅಡಿಕೆಯನ್ನೇ ಆಧರಿಸಿದೆ. ಈಚೆಗೆ ಅಂತರ್ಜಲ ಮಟ್ಟ 500 ಅಡಿಯವರೆಗೆ ಕುಸಿದಿದ್ದು, ರೈತರು ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ.

ಬಯಲುಸೀಮೆಯ ತಿರುಪತಿ ಖ್ಯಾತಿಯ ಇಲ್ಲಿನ ಲಕ್ಷ್ಮೀನರಸಿಂಹ ಸ್ವಾಮಿಯ ವಿಶಿಷ್ಟ ವಾಸ್ತುಶೈಲಿಯ ಭವ್ಯ ದೇವಾಲಯ ಎಲ್ಲರನ್ನು ಆಕರ್ಷಿಸುತ್ತದೆ. ಕಲ್ಲಿನಿಂದ ನಿರ್ಮಿತವಾಗಿರುವ ಆಕಾಶಕ್ಕೆ ಮುತ್ತಿಡುವ ನಾಲ್ಕು ಅಂತಸ್ತುಗಳ ದ್ವಾರಗೋಪುರ ದೇವಾಲಯದ ಪ್ರಮುಖ ಆಕರ್ಷಣೆ. ಇದು ಸರ್ವಧರ್ಮ ಸಮನ್ವಯದ ಸಂಕೇತವೂ ಹೌದು. ದೇಗುಲದ ಸುತ್ತಲೂ ಗಣೇಶ, ಈಶ್ವರ, ಲಕ್ಷ್ಮೀದೇವಿ, ಕೃಷ್ಣ, ಕಾಲಭೈರವ, ಆಂಜನೇಯ, ನವಗ್ರಹ ಮಂಟಪಗಳಿವೆ.

ಕ್ಷೇತ್ರದ ಇತಿಹಾಸ
ಇಲ್ಲಿ ಲಕ್ಷ್ಮೀನರಸಿಂಹಸ್ವಾಮಿ ನೆಲೆಸಿದ ಬಗ್ಗೆ ಅನೇಕ ದಂತಕತೆಗಳು ಇವೆ. ಹಿಂದೆ ಈ ಪ್ರದೇಶವನ್ನು ನಂದರಾಜನೆಂಬ ದೊರೆ ಆಳುತ್ತಿದ್ದುದರಿಂದ ನಂದರಾಜ ಪಟ್ಟಣವೆಂಬ ಹೆಸರಿತ್ತು. ಈ ರಾಜ ಬಹಳ ದುರಹಂಕಾರಿಯಾಗಿದ್ದ. ಇಲ್ಲಿಂದ ತಿರುಪತಿಗೆ ಹೋಗುವ ಭಕ್ತರನ್ನು ಹೆದರಿಸಿ ಅವರಲ್ಲಿದ್ದ ಹಣ ಕಸಿದುಕೊಂಡು ತೊಗಲಿನ (ಚರ್ಮ) ನಾಣ್ಯಗಳನ್ನು ಕೊಡುತ್ತಿದ್ದ. ಭಕ್ತರು ರಾಜನಿಗೆ ಎದುರು ಮಾತನಾಡದೆ ಚರ್ಮದ ನಾಣ್ಯಗಳನ್ನೇ ತೆಗೆದುಕೊಂಡು ಹೋಗಿ ತಿರುಪತಿ ಹುಂಡಿಗೆ ಹಾಕುತ್ತಿದ್ದರು. ಹೀಗೆಯೇ ಒಬ್ಬ ನೇಕಾರ ತಿರುಪತಿಗೆ ಹೋಗಲು ಹಣವಿಲ್ಲದೆ ರೇಷ್ಮೆ ವಸ್ತ್ರವೊಂದನ್ನು ರಾಜನಿಗೆ ನೀಡಿ, ಹಣಕೊಡುವಂತೆ ಬೇಡುತ್ತಾನೆ. ವಸ್ತ್ರ ಪಡೆದ ರಾಜ ಅವನಿಗೂ ಚರ್ಮದ ನಾಣ್ಯಗಳನ್ನೇ ಕೊಡುತ್ತಾನೆ. ನೇಕಾರ ತಿರುಪತಿಗೆ ಹೋಗಿ, ಹುಂಡಿಯಲ್ಲಿ ಹಣ ಹಾಕಿ `ರಾಜನ ದುರಹಂಕಾರವನ್ನು ಮಣಿಸು~ ಎಂದು ಬೇಡಿಕೊಳ್ಳುತ್ತಾನೆ. ಆಗ ವೆಂಕಟೇಶ್ವರ ಸ್ವಾಮಿ ನಂದರಾಜನ ಅಹಂಕಾರಕ್ಕೆ ಅಂತ್ಯ ಹಾಡಲು ನಿರ್ಧರಿಸಿ ಇಲ್ಲಿಗೆ ಬರುತ್ತಾನೆ.

ಪಕ್ಕದ ಕೃಷ್ಣಾಚಲ ಬೆಟ್ಟದ ಮೇಲೆ ಕುಳಿತ ತಿಮ್ಮಪ್ಪ ಒಮ್ಮೆ ನಂದರಾಜ ಪಟ್ಟಣದ ಮೇಲೆ ಉರಿಗಣ್ಣು ಬಿಡುತ್ತಾನೆ. ಆಗ ಇದ್ದಕ್ಕಿದ್ದಂತೆ ಇಡೀ ಪಟ್ಟಣ ಬೆಂಕಿಯಿಂದ ಉರಿಯಲು ಆರಂಭವಾಗುತ್ತದೆ. ಆಗ ತಾನೆ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆಯೊಬ್ಬಳು `ಮಗುವನ್ನು ಹರಿವಾಣದಲ್ಲಿ ಹಾಕಿ, ಕರ್ಪೂರದ ಆರತಿ ಹಚ್ಚಿ ಕೃಷ್ಣಾಚಲ ಬೆಟ್ಟದ ಕಡೆ ಬೆಳಗುತ್ತಾಳೆ. `ಸ್ವಾಮಿ ನಂದನನ್ನು ಕೊಂದು, ಕಂದನನ್ನು ರಕ್ಷಿಸು. ಮುಂದೆ ಎಂದೆಂದೂ ಬಾಸಿಂಗ ತೊಡಿಸುತ್ತೇನೆ~ ಎಂದು ಕೈಮುಗಿಯುತ್ತಾಳೆ. ದೇವರು ತನ್ನ ದೃಷ್ಟಿಯನ್ನು ಹಿಂದಕ್ಕೆ ಪಡೆಯುತ್ತಾನೆ. ಆಗ ಬೆಂಕಿ ನಂದಿ ಪ್ರಜೆಗಳು ಬದುಕುಳಿಯುತ್ತಾರೆ. ನಂತರ ಸ್ವಾಮಿ ಊರಿನ ಹೊರವಲಯದ ಒಂದು ಹುತ್ತದಲ್ಲಿ ಐಕ್ಯವಾಗುತ್ತಾನೆ. ಮತಿಗಟ್ಟ ಗ್ರಾಮದ ಹಸುವೊಂದು ಸ್ವಾಮಿಯ ಹುತ್ತಕ್ಕೆ ಹಾಲೆರೆಯುತ್ತಿರುತ್ತದೆ. ಮನೆಯಲ್ಲಿ ಹಾಲು ಕೊಡದ ಹಸುವಿನ ಬಗ್ಗೆ ಅನುಮಾನಗೊಂಡ ಒಡೆಯ ಹಸುವನ್ನು ಹಿಂಬಾಲಿಸಿ ಹೋದಾಗ ಹುತ್ತಕ್ಕೆ ಹಾಲು ಕರೆಯುವ ದೃಶ್ಯ ಕಾಣುತ್ತದೆ. ಆಗ ಅಲ್ಲಿ ದೇವಾಲಯ ನಿರ್ಮಿಸಿ ಪೂಜೆ ಆರಂಭಿಸಲಾಯಿತು. ದೇವರು ನೆಲೆಸಿದ ಜಾಗ ನಂದರಾಜ್ಯಕ್ಕೆ ಹೊರಗಿನ ಕೇರಿಯಾಗಿದ್ದರಿಂದ `ಹೊರಕೇರಿ ದೇವರಪುರ~ ಎಂಬ ಹೆಸರು ಬಂತು ಎನ್ನುತ್ತಾರೆ ಕ್ಷೇತ್ರ ಮಹಿಮೆ ಪುಸ್ತಕ ಬರೆದಿರುವ ಎಸ್ಎಲ್ಎನ್ಎಸ್ ಟ್ರಸ್ಟ್ ಅಧ್ಯಕ್ಷ ಎಚ್.ಡಿ. ರಂಗಯ್ಯ.

ಅಭಿವೃದ್ಧಿ ಮರೀಚಿಕೆ
ತಾಲ್ಲೂಕು ಕೇಂದ್ರದಿಂದ 30 ಕಿ.ಮೀ. ದೂರದ ಈ ಗ್ರಾಮ ಸುತ್ತಲಿನ 30 ಹಳ್ಳಿಗಳಿಗೆ ಪ್ರಮುಖ ಕೇಂದ್ರ. ಸಂತೆ, ವ್ಯಾಪಾರ, ವಹಿವಾಟುಗಳಿಗೆ ಸುತ್ತಲಿನ ಗ್ರಾಮಸ್ಥರು ಇದೇ ಗ್ರಾಮಕ್ಕೆ ಬರಬೇಕು. ಇಂತಹ ಪ್ರಮುಖ ಗ್ರಾಮ ಅಭಿವೃದ್ಧಿಯಿಂದ ವಂಚಿತವಾಗಿದೆ. ಗ್ರಾಮದಲ್ಲಿ ಸ್ವಚ್ಛತೆ ಕೊರತೆಯಿದೆ. ಸುವರ್ಣಗ್ರಾಮ ಯೋಜನೆಯಲ್ಲಿ ಸುಮಾರು ್ಙ 4 ಕೋಟಿ ಹಣ ಬಂದಿದ್ದರೂ, ್ಙ 50 ಲಕ್ಷದ ಕೆಲಸವನ್ನೂ ಮಾಡಲಿಲ್ಲ. ಮುಜರಾಯಿ ಇಲಾಖೆಯಿಂದ 10 ವರ್ಷಗಳ ಹಿಂದೆ ನಿರ್ಮಿಸಿರುವ ಸಮುದಾಯಭವನ ಉಪಯೋಗವಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಪದವಿ ಕಾಲೇಜು ಬೇಕು
ವಿದ್ಯಾರ್ಥಿಗಳು ಪದವಿ ವ್ಯಾಸಂಗಕ್ಕೆ 30 ಕಿ.ಮೀ ದೂರದ ಚಿತ್ರದುರ್ಗ ಅಥವಾ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕು. ಗ್ರಾಮಕ್ಕೆ ಸರ್ಕಾರಿ ಪದವಿ ಕಾಲೇಜು ಮಂಜೂರು ಮಾಡಬೇಕು ಎಂದು ಒತ್ತಾಯಿಸುತ್ತಾರೆ ತಿಪ್ಪೇಸ್ವಾಮಿ.

ಆಸ್ಪತ್ರೆ ಮೇಲ್ದರ್ಜೆಗೆ ಏರಲಿ
ಇಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಬೇಕು. ಆಸ್ಪತ್ರೆ ಮೇಲ್ದರ್ಜೆಗೆ ಏರಬೇಕು. ಕಸವನಹಳ್ಳಿ ಮಾರ್ಗವಾಗಿ ಗೊಡಬನಾಳು ಮೂಲಕ ಜಿಲ್ಲಾ ಕೇಂದ್ರಕ್ಕೆ ನೇರ ಮಾರ್ಗ ಕಲ್ಪಿಸಬೇಕು ಎನ್ನುವುದು ಎಚ್.ಡಿ. ರಂಗಯ್ಯ ಅವರ ಒತ್ತಾಯ.

ಶೌಚಾಲಯ ಬೇಕು
ಸಾರ್ವಜನಿಕ ಶೌಚಾಲಯ ಬೇಕು. ಸಮುದಾಯ ಭವನ ಮರು ನಿರ್ಮಿಸಬೇಕು. ಮುಂದೆ ಮಳಿಗೆಗಳನ್ನು ನಿರ್ಮಿಸಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಎಂ.ಎಚ್. ಪಾಂಡುರಂಗಯ್ಯ ಅವರ ಬೇಡಿಕೆ.

ಸಾರಿಗೆ ವ್ಯವಸ್ಥೆ ಬೇಕು
ತಾಲ್ಲೂಕು ಕೇಂದ್ರಕ್ಕೆ ನೇರ ಬಸ್ ಸೌಲಭ್ಯ ಇಲ್ಲ. ಬಸ್ಗಳ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ಅಗತ್ಯವಿರುವಷ್ಟು ಕೆಎಸ್ಆರ್ಟಿಸಿ ಬಸ್ಗಳನ್ನು ಬಿಡಬೇಕು ಎನ್ನುತ್ತಾರೆ ಸಣ್ಣಸಿದ್ದಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.