ಶನಿವಾರ, ಮಾರ್ಚ್ 6, 2021
19 °C
ಕೃತ್ಯ ನಡೆದ 24 ಗಂಟೆಯಲ್ಲೇ ಕೊಲೆ ಆರೋಪಿಗಳ ಬಂಧನ

ಹೊರ ಬಂದ ಅನೈತಿಕ ಸಂಬಂಧ: ಕೊಲೆಯಲ್ಲಿ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊರ ಬಂದ ಅನೈತಿಕ ಸಂಬಂಧ: ಕೊಲೆಯಲ್ಲಿ ಅಂತ್ಯ

ಗುಬ್ಬಿ: ತಾಲ್ಲೂಕಿನ ಕೋಣನಕಲ್ಲು ಗ್ರಾಮದಲ್ಲಿ ನಡೆದಿದ್ದ ಮಹಿಳೆ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಘಟನೆ ನಡೆದ 24 ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ.ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ಜಗದಾಪುರ ನಿವಾಸಿ ಪ್ರವೀಣ (28), ಕೋಣನಕಲ್ಲು ನಿವಾಸಿ ಜ್ಯೋತಿ (24) ಬಂಧಿತರು. ಆರೋಪಿಗಳಿಂದ ದ್ವಿಚಕ್ರ ವಾಹನ, ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿ ಪ್ರವೀಣ ಮತ್ತು ಜ್ಯೋತಿ ಕಳೆದ ಮೂರು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು. ಜ. 1ರಂದು ಜ್ಯೋತಿ ಪತಿ ರಾಘವೇಂದ್ರ ಮೃತಪಟ್ಟಿದ್ದರು. ಜ. 22ರಂದು ರಾತ್ರಿ 12ರ ಸುಮಾರಿಗೆ ಜ್ಯೋತಿಯನ್ನು ಸಂಪರ್ಕಿಸಲು ಬಂದ ಆರೋಪಿಯನ್ನು ಆಕೆಯ ಅತ್ತೆ ಪ್ರೇಮಾಬಾಯಿ ನೋಡಿ, ಗಲಾಟೆ ಮಾಡಿದ್ದರು. ಆಕೆ ಗಲಾಟೆ ಜೋರು ಮಾಡಿದಾಗ ಕುತ್ತಿಗೆಗೆ ಟವಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.ಮೃತದೇಹವನ್ನು ಮನೆಯ ಪಡಸಾಲೆ ಮೇಲೆ ಮಲಗಿಸಿ ಆರೋಪಿ ಪ್ರವೀಣ ಪರಾರಿಯಾಗಿದ್ದ  ಎಂದು ಪೊಲೀಸರು ತಿಳಿಸಿದ್ದಾರೆ. ಸರ್ಕಲ್‌ ಇನ್‌ಸ್ಪೆಕ್ಟರ್‌ ವೆಂಕಟರಮಣಪ್ಪ, ಪಿಎಸ್‌ಐ ಮಂಜುನಾಥ್, ಸಿ.ಎಸ್‌.ಪುರ ಠಾಣೆ ಪಿಎಸ್‌ಐ ವಿಜಯ್‌ಕುಮಾರ್, ಜಿಲ್ಲಾ ಪೊಲೀಸ್‌ ಕಚೇರಿಯ ಎಸ್.ಎನ್.ನರಸಿಂಹರಾಜು, ಸಿಬ್ಬಂದಿ ಎನ್‌.ವೆಂಕಟೇಶ, ವೆಂಕಟೇಶ, ಧರಣೇಶ್ ಕುಮಾರ್ ಅವರನ್ನು ಒಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.