ಹೊಸ ಗ್ರಹ ಸಂಸಾರ
ವಾಷಿಂಗ್ಟನ್ (ಪಿಟಿಐ): 2000 ಬೆಳಕಿನ ವರ್ಷಗಳಷ್ಟು ದೂರದಲ್ಲಿ ಆರು ಗ್ರಹಗಳು ಸೂರ್ಯನಂತಹ ನಕ್ಷತ್ರದ ಸುತ್ತ ಗಿರಕಿ ಹಾಕುತ್ತಿರುವುದನ್ನು ಖಗೋಳವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ನಾಸಾದ ಕೆಪ್ಲರ್ ಯೋಜನೆಯ ತಂತ್ರಜ್ಞಾನದ ನೆರವಿನಿಂದ ಇದನ್ನು ಕಂಡುಹಿಡಿದಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಇದನ್ನು ವಿಸ್ಮಯದ ಗ್ರಹಕೂಟ ಎಂದು ಬಣ್ಣಿಸಿದ್ದಾರೆ.
ಈ ಗ್ರಹ ಸಂಸಾರದ ಅತಿ ಚಿಕ್ಕ ಕಾಯ ಭೂಮಿಗಿಂತ 2.3 ರಷ್ಟು ದೊಡ್ದದಾಗಿದ್ದರೆ ಅತಿ ದೊಡ್ಡ ಕಾಯ ಭೂಮಿಗಿಂತ 13.5ರಷ್ಟು ದೊಡ್ಡದಿದೆ. ತಾವು ಕಂಡುಹಿಡಿದಿರುವ ಈ ಸೂರ್ಯನಿಗೆ ವಿಜ್ಞಾನಿಗಳು ಕೆಪ್ಲರ್-11 ಎಂದು ನಾಮಕರಣ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.