ಮುಂಬೈ(ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರದ ವಹಿವಾಟಿನಲ್ಲಿ 22 ಸಾವಿರ ಅಂಶಗಳ ಗಡಿ ದಾಟಿ ಮುನ್ನಡೆದು ಹೊಸ ದಾಖಲೆ ನಿರ್ಮಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಏ. 1ರಂದು ಪ್ರಕಟಿಸಲಿರುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿ ದರ ತಗ್ಗಿಸಬಹುದು ಎಂಬ ವಿಶ್ಲೇಷಣೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಸೋಮವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ (ಎಫ್ಐಐ) ಬ್ಯಾಂಕಿಂಗ್ ವಲಯದ ಷೇರುಗಳಲ್ಲಿ ದಿಢೀರನೆ ಹೂಡಿಕೆ ಹೆಚ್ಚಿತು. ಇದರಿಂದ ಸೂಚ್ಯಂಕ ದಿನದ ವಹಿವಾಟಿನಲ್ಲಿ 300 ಅಂಶಗಳಷ್ಟು ಚಿಮ್ಮಿ ಹೊಸ ಸಾರ್ವಕಾಲಿಕ ದಾಖಲೆ ನಿರ್ಮಿಸಿತು.

ಕಳೆದ ಎರಡು ವಾರಗಳಲ್ಲಿ ದಾಖಲಾಗಿರುವ ದಿನವೊಂದರ ಗರಿಷ್ಠ ಏರಿಕೆ ಇದಾಗಿದೆ. ವಹಿವಾಟಿನ ಒಂದು ಹಂತದಲ್ಲಿ ಸೂಚ್ಯಂಕ 22,074 ಅಂಶಗಳವರೆಗೂ ಏರಿಕೆ ಕಂಡಿತ್ತು. ಇದಕ್ಕೂ ಮೊದಲು ಅಂದರೆ, ಮಾರ್ಚ್ 18 ರಂದು ಮಧ್ಯಂತರದಲ್ಲಿ ಸೂಚ್ಯಂಕ 22,040 ಅಂಶಗಳವರೆಗೂ ಏರಿಕೆ ಆಗಿದ್ದುದು ಈವರೆಗಿನ ದಾಖಲೆಯಾಗಿತ್ತು.

ಷೇರುಪೇಟೆ ಚೇತರಿಕೆಯಿಂದ ಡಾಲರ್ ವಿರುದ್ಧ ರೂಪಾಯಿ ವಿನಿ ಮಯ ಮೌಲ್ಯವೂ ಸೋಮವಾರ 22 ಪೈಸೆಗಳಷ್ಟು ಏರಿಕೆ ಕಂಡು 6 ತಿಂಗಳ ಗರಿಷ್ಠ ಮಟ್ಟವಾದ ರೂ. 60.67ರಲ್ಲಿ ವಹಿವಾಟು ಕೊನೆಗೊಳಿಸಿತು.

ಬ್ಯಾಂಕಿಂಗ್, ತೈಲ ಶುದ್ಧೀಕರಣ, ಲೋಹ, ವಾಹನ ಉದ್ಯಮ, ವಿದ್ಯುತ್ ಮತ್ತು ಭಾರಿ ಯಂತ್ರೋಪಕರಣ ವಲ ಯಗಳ ಷೇರುಗಳು ದಿನದ ವಹಿವಾಟಿ ನಲ್ಲಿ ಏರಿಕೆ ಕಂಡವು. ಔಷಧ, ಎಲೆ ಕ್ಟ್ರಾನಿಕ್ಸ್ ಮತ್ತು ಐ.ಟಿ ವಲಯದ ಷೇರು ಗಳು ಕುಸಿತ ಕಂಡವು. ಗೇಲ್ ಇಂಡಿಯಾ ಷೇರು ಮೌಲ್ಯ ಶೇ 4.81ರಷ್ಟು, ಒಎನ್ ಜಿಸಿ ಶೇ 4.27ರಷ್ಟು ಗರಿಷ್ಠ ಏರಿಕೆ ದಾಖಲಿಸಿತು. ಷೇರುಪೇಟೆಯ ಬಂಡವಾಳ ಮೌಲ್ಯ ರೂ. 70.51 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಕೂಡ 88 ಅಂಶಗಳಷ್ಟು ಏರಿಕೆ ಪಡೆದು ದಾಖಲೆ ಮಟ್ಟವಾದ 6,583 ಅಂಶಗ ಳಿಗೆ ದಿನದ ವಹಿವಾಟು ಕೊನೆಗೊಳಿ ಸಿತು. ಹಣದುಬ್ಬರ ತಗ್ಗಿರುವ ಹಿನ್ನೆಲೆ ಯಲ್ಲಿ ‘ಆರ್ಬಿಐ’ ಬಡ್ಡಿ ದರ ಕಡಿತ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿ ದ್ದಾರೆ.

ಮಾ. 20ರವರೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಪೇಟೆಯಿಂದ ರೂ. 17 ಸಾವಿರ ಕೋಟಿ ಹೂಡಿಕೆ ಮಾಡಿ ಷೇರುಗಳನ್ನು ಖರೀದಿಸಿದ್ದಾರೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.