ಬುಧವಾರ, ಮಾರ್ಚ್ 3, 2021
31 °C

ಹೊಸ ಪಠ್ಯಕ್ರಮದ ಪುಸ್ತಕ ಸಕಾಲದಲ್ಲಿ ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ಪಠ್ಯಕ್ರಮದ ಪುಸ್ತಕ ಸಕಾಲದಲ್ಲಿ ಪೂರೈಕೆ

ಕಾರವಾರ: ಹೊಸ ಪುಸ್ತಕಗಳೊಂದಿಗೆ ಬದಲಾಗಿರುವ 5 ಮತ್ತು 8ನೇ ತರಗತಿಯ ಪಠ್ಯಕ್ರಮದ ಪುಸ್ತಕಗಳನ್ನೂ ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಇಲ್ಲಿಯ ಕಾಜುಬಾಗದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಸ್ತಕಗಳನ್ನು ಸರಬರಾಜು ಮಾಡಲಾಗುತ್ತಿದೆ. ಹೊಸ ಪಠ್ಯಕ್ರಮದ ಪುಸಕ್ತಗಳನ್ನು ಸೂಕ್ತ ಸಮಯದಲ್ಲಿ ಪೂರೈಸುವ ಬಗ್ಗೆ ಸಂಪುಟ ಸಭೆಯಲ್ಲೂ ನಿರ್ಣಯಿಸಲಾಗಿದೆ ಎಂದರು.ಪಿಯುಸಿ ಪ್ರಶ್ನೆ ಪತ್ರಿಕೆ ಬಹಿರಂಗವಾದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂದರ್ಭದಲ್ಲೂ ಅಂತಹ ಘಟನೆಗಳು ಮರುಕಳಿಸಬಾರದು ಎನ್ನುವ ದೃಷ್ಟಿಯಿಂದ ಅಗತ್ಯ ಮುನ್ನಚ್ಚರಿಕೆ ಕ್ರಮಕೈಗೊಳ್ಳಲಾಗಿದೆ. ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳು ಭಯಪಡಬಾರದು ಎನ್ನುವ ದೃಷ್ಟಿಯಿಂದ ಈ ಸಲದಿಂದ 15 ನಿಮಿಷ ಮುಂಚಿತವಾಗಿ ಪ್ರಶ್ನೆಪತ್ರಿಕೆ ಗಳನ್ನು ನೀಡಲಾಗುತ್ತಿದೆ ಎಂದರು.ಬೆಂಗಳೂರಿನಲ್ಲಿ ಪ್ರಶ್ನೆಪತ್ರಿಕೆ ಮಾರಾಟ ಮಾಡುತ್ತಿದ್ದ ಗುಂಪೊಂದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರ ಬಳಿಯಿದ್ದ ಪ್ರಶ್ನೆಪತ್ರಿಕೆಯನ್ನು ಪರಿಶೀಲಿಸಲಾಗಿದ್ದು ಪರೀಕ್ಷೆಯಲ್ಲಿ ನೀಡಿರುವ ಪ್ರಶ್ನೆಪತ್ರಿಕೆಗೆ ಅವರ ಬಳಿಯಿದ್ದ ಪತ್ರಿಕೆಗೂ ಯಾವುದೇ ರೀತಿಯ ಸಾಮ್ಯತೆ ಇಲ್ಲ ಎಂದು ಸಚಿವರು ನುಡಿದರು. ಪಿಯು ಪರೀಕ್ಷಾ ಮಂಡಳಿ ನಿರ್ದೇಶಕಿ ರಶ್ಮಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಇಲಾಖೆ ಅಧಿಕಾರಿಗಳ ನಡುವಿನ ಅಸಮಾಧಾನವೂ ಪತ್ರಿಕೆ ಬಹಿರಂಗಕ್ಕೆ ಕಾರಣವಾಗಿದೆ ಎನ್ನುವ ಅಂಶಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಎಸ್‌ಎಸ್‌ಎಲ್‌ಸಿ ಪರೀಕ್ಷೆ: 25 ವಿದ್ಯಾರ್ಥಿಗಳು ಗೈರು

ಮುಂಡಗೋಡ: ಸೋಮವಾರದಿಂದ ಪ್ರಾರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಾಲ್ಲೂಕಿನ ಒಟ್ಟು ಮೂರು ಕೇಂದ್ರಗಳಲ್ಲಿ 1109 ವಿದ್ಯಾರ್ಥಿಗಳು ಪರೀಕ್ಷೆ ಬರೆ ದರು.ಪರೀಕ್ಷಾ ಕೇಂದ್ರದಲ್ಲಿ ದಾಖಲಾದ ಒಟ್ಟು 1134 ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಸ.ಪ.ಪೂ.ಕಾಲೇಜಿನಲ್ಲಿ 343 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ 7 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಸ.ಪ್ರೌ.ಶಾಲೆ ಕಾತೂರನಲ್ಲಿ 306 ವಿದ್ಯಾರ್ಥಿಗಳು ಹಾಜರಾಗಿ 11 ವಿದ್ಯಾರ್ಥಿಗಳು ಗೈರಾದರು. ರೋಟರಿ ಪ್ರೌಢಶಾಲೆಯಲ್ಲಿ 460 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 7 ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿದರು. 23 ವಿದ್ಯಾರ್ಥಿಗಳು ಗೈರು

ಯಲ್ಲಾಪುರ: ಸೋಮವಾರದಿಂದ ಆರಂಭವಾದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲ್ಲೂಕಿನ  ನಾಲ್ಕು ಪರೀಕ್ಷಾ ಕೇಂದ್ರಗಳ 1105 ವಿದ್ಯಾರ್ಥಿ ಗಳಲ್ಲಿ 1082 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 23 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.ಪಟ್ಟಣದ ವೈ.ಟಿ.ಎಸ್.ಎಸ್. ಶಿಕ್ಷಣಸಂಸ್ಥೆಯ ಪರೀಕ್ಷಾ ಕೇಂದ್ರದ 167 ಗಂಡು ಮಕ್ಕಳಲ್ಲಿ 165 ವಿದ್ಯಾರ್ಥಿಗಳು ಹಾಜರಾಗಿದ್ದರೆ, 129 ವಿದ್ಯಾರ್ಥಿನಿ ಯರಲ್ಲಿ 129 ವಿದ್ಯಾರ್ಥಿಗಳು ಹಾಜ ರಾಗಿದ್ದಾರೆ.ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ 161 ಗಂಡು ಮಕ್ಕಳ ಪೈಕಿ 156 ವಿದ್ಯಾರ್ಥಿಗಳು ಹಾಜರಾಗಿದ್ದು, 134 ವಿದ್ಯಾರ್ಥಿನಿ ಯರಲ್ಲಿ 131 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿರುತ್ತಾರೆ. ಸರ್ಕಾರಿ ಪ್ರೌಢಶಾಲೆ ಯಲ್ಲಾಪುರದ ಪರೀಕ್ಷಾ ಕೇಂದ್ರದಲ್ಲಿ 157 ಗಂಡು ಮಕ್ಕಳ ಪೈಕಿ 153 ಮಕ್ಕಳು ಹಾಜ ರಾಗಿದ್ದು, 139 ಹೆಣ್ನು ಮಕ್ಕಳಲ್ಲಿ 137 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾ ಗಿರುತ್ತಾರೆ.ಮಂಚಿಕೇರಿಯ ರಾಜರಾಜೇಶ್ವರಿ ಹೈಸ್ಕೂಲಿನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ 122 ಗಂಡು ಮಕ್ಕಳ ಪೈಕಿ 116 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜ ರಾಗಿದ್ದರೆ 96 ವಿದ್ಯಾರ್ಥಿನಿಯರಲ್ಲಿ 95 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾ ಗಿರುತ್ತಾರೆ.ತಾಲ್ಲೂಕಿನಲ್ಲಿ 607 ಗಂಡು ವಿದ್ಯಾರ್ಥಿಗಳಲ್ಲಿ 590 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ, 498 ವಿದ್ಯಾರ್ಥಿನಿಯರಲ್ಲಿ 492 ವಿದ್ಯಾರ್ಥಿ ನಿಯರು ಪರೀಕ್ಷೆಗೆ ಹಾಜರಾಗಿರುತ್ತಾ ರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ದಿವಾಕರ ಶೆಟ್ಟಿ ಪ್ರಜಾವಣಿಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.