ಮಂಗಳವಾರ, ಮೇ 11, 2021
24 °C

ಹೊಸ ಪ್ರಯೋಗಕ್ಕೆ ಮುಂದಾದ ಕೂರ್ಗ್ಸ್ ಆರೆಂಜ್ ಕ್ಲಬ್:ಮೇ 16ರಿಂದ ರಿಂಕ್ ಹಾಕಿ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೂರ್ಗ್ಸ್ ಆರೆಂಜ್ ಕ್ಲಬ್ ಆಶ್ರಯದಲ್ಲಿ ತಲಾ ಐದು ಮಂದಿ ಆಟಗಾರರಿರುವ `ಕೊಡವ ರಿಂಕ್ ಹಾಕಿ~ ಟೂರ್ನಿಯು ಮೇ 16 ರಿಂದ 20ರವರೆಗೆ ನಗರದಲ್ಲಿ ನಡೆಯಲಿದೆ. ಇದೊಂದು ಹೊಸ ಪ್ರಯೋಗವಾಗಿದ್ದು, ಟ್ವೆಂಟಿ-20 ಕ್ರಿಕೆಟ್‌ನಂತೆ ಹಾಕಿಯನ್ನು ರೋಚಕಗೊಳಿಸಲು ಸಂಘಟಕರು ಮುಂದಾಗಿದ್ದಾರೆ.ಕೊಡವ ಕುಟುಂಬ ಹಾಗೂ ಕೊಡವ ಸಂಘಗಳ ಸುಮಾರು 50 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ನಾಕ್‌ಔಟ್ ಮಾದರಿಯ ಈ ಟೂರ್ನಿ ಲ್ಯಾಂಗ್‌ಫೋರ್ಡ್ ಹಾಕಿ ಕ್ರೀಡಾಂಗಣದಲ್ಲಿ ಜರುಗಲಿದೆ. ತಂಡದಲ್ಲಿ 9 ಆಟಗಾರರು ಇರಬಹುದು. ಆದರೆ ಕಣಕ್ಕಿಳಿಯುವ ಅಂತಿಮ ತಂಡದಲ್ಲಿ ಐದು ಮಂದಿಗೆ ಮಾತ್ರ ಅವಕಾಶ ಇರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.ಕೊಡವ ಕುಟುಂಬಗಳ ನಡುವೆ ನಡೆಯಲಿರುವ ಟೂರ್ನಿಯಲ್ಲಿ ಚಾಂಪಿಯನ್ ಆಗುವ ತಂಡ ಒಂದು ಲಕ್ಷ ರೂ. ಬಹುಮಾನ ಪಡೆಯಲಿದೆ. ಹಾಗೇ, ಎರಡನೇ ಸ್ಥಾನ (50 ಸಾವಿರ ರೂ.), ಮೂರನೇ ಸ್ಥಾನ (25 ಸಾವಿರ ರೂ.) ಹಾಗೂ ನಾಲ್ಕನೇ ಸ್ಥಾನ (15 ಸಾವಿರ ರೂ.) ಪಡೆಯುವ ತಂಡಗಳಿಗೂ ಬಹುಮಾನವಿರುತ್ತದೆ.`ಇದೊಂದು ಹಾಕಿ ಟೂರ್ನಿ ಮಾತ್ರವಲ್ಲ; ಇದು ವಿಶಿಷ್ಟ ರೀತಿಯ ಉತ್ಸವ. ಮಹಿಳೆಯರು ಕೂಡ ತಂಡಗಳನ್ನು ಪ್ರತಿನಿಧಿಸಬಹುದು. ಪ್ರತಿ ಪಂದ್ಯದ ಅವಧಿ 10-3-10 ನಿಮಿಷ ಹಾಗೂ ನಾಕ್‌ಔಟ್ ಹಂತದಲ್ಲಿ 12.5-3-12.5 ನಿಮಿಷ~ ಎಂದು ಕೂರ್ಗ್ಸ್ ಆರೆಂಜ್ ಕ್ಲಬ್‌ನ ಸ್ಥಾಪಕರಲ್ಲಿ ಒಬ್ಬರಾದ ಕಂಬೇಯಂಡ ಮೋಹನ್ ನಾಣಯ್ಯ ಸೋಮವಾರ ಹೇಳಿದರು.`ಮಾಜಿ ಹಾಕಿ ಆಟಗಾರರಾದ ಬಿ.ಪಿ.ಗೋವಿಂದ, ಎಂ.ಪಿ.ಗಣೇಶ್, ಪಿ.ಇ.ಕಾಳಯ್ಯ, ಎಂ.ಎಂ.ಸೋಮಯ್ಯ, ಬಿ.ಕೆ.ಸುಬ್ರಮಣಿ, ಎ.ಬಿ.ಸುಬ್ಬಯ್ಯ ಈ ಟೂರ್ನಿಗೆ ಬೆಂಬಲವಾಗಿ ನಿಂತಿದ್ದಾರೆ~ ಎಂದು ಅವರು ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಎಂ.ಪಿ.ಗಣೇಶ್ ಹಾಗೂ ಕ್ಲಬ್‌ನ ಸ್ಥಾಪಕ ಸದಸ್ಯರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.